Home ಇಕಾಲಜಿ ತುಮಕೂರಿನ ಶಿವಗಂಗಾ ಬೆಟ್ಟದಲ್ಲಿ ಪ್ಲಾಸ್ಟಿಕ್ ಸಂಗ್ರಹ ಅಭಿಯಾನ

ತುಮಕೂರಿನ ಶಿವಗಂಗಾ ಬೆಟ್ಟದಲ್ಲಿ ಪ್ಲಾಸ್ಟಿಕ್ ಸಂಗ್ರಹ ಅಭಿಯಾನ

0

ಶಿವಗಂಗಾ ಹಿಲ್ಸ್, ತುಮಕೂರು:  ಯುವಧ್ವನಿ ಡಿಬೇಟ್ ಕ್ಲಬ್ ಶಿವಗಂಗಾ ಬೆಟ್ಟಗಳಲ್ಲಿ ಪ್ಲಾಸ್ಟಿಕ್ ಸಂಗ್ರಹಿಸುವ ಅಭಿಯಾನವನ್ನು ಇತ್ತೀಚೆಗೆ ಯಶಸ್ವಿಗೊಳಿಸಿತು.

ಮಾನಸ ಅವರ ನೇತೃತ್ವದಲ್ಲಿ, 11 ಜನ ಸ್ವಯಂಸೇವಕರ ತಂಡವು ಪರಿಸರದ ಮೇಲೆ ಪ್ಲಾಸ್ಟಿಕ್ ತ್ಯಾಜ್ಯದ ಹಾನಿಕಾರಕ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಜವಾಬ್ದಾರಿಯುತ ತ್ಯಾಜ್ಯ ನಿರ್ವಹಣೆಯನ್ನು ಉತ್ತೇಜಿಸಲು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.

ಬೆಳಿಗ್ಗೆ ಸುಮಾರು 11.30 ಗಂಟೆಗೆ  ಬೆಟ್ಟದ ತುದಿಯನ್ನು ತಲಪಿದ ತಂಡವು ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸುವ ಕಾರ್ಯವನ್ನು ಪ್ರಾರಂಭಿಸಿತು. ಇಬ್ಬರು ಸ್ವಯಂ ಸೇವಕರನ್ನೊಳಗೊಂಡ ಪ್ರತಿ ತಂಡವು ಪ್ಲಾಸ್ಟಿಕ್ ಬಾಟಲಿಗಳು ಮತ್ತು ಬಿಸಾಡಿದ ಇತರ ಪ್ಲಾಸ್ಟಿಕ್ ವಸ್ತುಗಳನ್ನು ಸಂಗ್ರಹಿಸಿತು.

ಇದೇ ಸಂದರ್ಭದಲ್ಲಿ ಪ್ರವಾಸಿಗರು ಮತ್ತು ಅಂಗಡಿಯವರಿಗೆ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡಲಾಯಿತು. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವ, ಮರುಬಳಕೆ ಮಾಡುವ ಬಗ್ಗೆ ಮಾಹಿತಿಗಳನ್ನು ನೀಡಲಾಯಿತು.

ಗಂಟೆಗಟ್ಟಲೆ ಶ್ರಮಿಸಿದ ತಂಡವು 20 ಕಿಲೋಗ್ರಾಂಗಳಷ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿತು. ಈ ಅಭಿಯಾನವು ಸ್ವಚ್ಛ ಪರಿಸರಕ್ಕೆ ಕಾರಣವಾಯಿತಲ್ಲದೆ ಸುಸ್ಥಿರ ತ್ಯಾಜ್ಯ ನಿರ್ವಹಣಾ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕಾದ ತುರ್ತು ಅಗತ್ಯವನ್ನು ಒತ್ತಿಹೇಳಿತು.

ಯುವಧ್ವನಿ ಡಿಬೇಟ್ ಕ್ಲಬ್ ಭಾಗವಹಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸಿತು.

You cannot copy content of this page

Exit mobile version