ಇನ್ನು ಮುಂದೆ ಬಾಯಿ ಮುಚ್ಚಿಕೊಂಡು ಇರಿ: ಬಿಜೆಪಿಯಿಂದ ಕಂಗನಾಗೆ ಪಬ್ಲಿಕ್ ವಾರ್ನಿಂಗ್‌

ಹೊಸದೆಹಲಿ: ರೈತ ಹೋರಾಟದ ಸಂದರ್ಭದಲ್ಲಿ ಬಿಜೆಪಿ ಬಲವಾಗಿ ಇಲ್ಲದೆ ಹೋಗಿದ್ದರೆ ಭಾರತದಲ್ಲೂ ಬಾಂಗ್ಲಾದಂತಹ ಪರಿಸ್ಥಿತಿ ಉಂಟಾಗುತ್ತಿತ್ತು ಎನ್ನುವ ಕಂಗನಾ ಅವರ ಹೇಳಿಕೆ ಬಿಜೆಪಿಯಲ್ಲಿ ತಲ್ಲಣ ಹುಟ್ಟಿಸಿದೆ.

ಸದಾ ಒಂದಲ್ಲ ಒಂದು ವಿವಾದಸ್ಪದ ಹೇಳಿಕೆ ನೀಡುತ್ತಾ ತಾನು ಇಕ್ಕಟ್ಟಿಗೆ ಸಿಲುಕುವುದಲ್ಲದೆ ಬಿಜೆಪಿಯನ್ನೂ ಅಡಕತ್ತರಿಯಲ್ಲಿ ಸಿಲುಕಿಸುವ ಸಂಸದೆ ಕಂಗನಾ ಅಭ್ಯಾಸದಿಂದ ಬಿಜೆಪಿ ಕಂಗೆಟ್ಟಂತಿದೆ. ಈ ಬಾರಿ ಬಿಜೆಪಿ ಸಂಸದೆಗೆ ಸಾರ್ವಜನಿಕವಾಗಿಯೇ ತಪರಾಕಿ ನೀಡಿದೆ.

ಸದ್ಯದಲ್ಲೇ ಹರಿಯಾಣದಲ್ಲಿ ಚುನಾವಣೆ ಇರುವ ಹಿನ್ನೆಲೆಯಲ್ಲಿ ಕಂಗನಾ ಹೇಳಿಕೆ ಬಿಜೆಪಿ ಪಾಲಿಗೆ ಭಾರೀ ಹಿನ್ನೆಡೆಯಾಗುವ ಸಂಭವವಿದೆ. ಈಗಾಗಲೇ ಹಲವು ಕಾರಣಗಳಿಗಾಗಿ ಹರ್ಯಾಣ ಬಿಜೆಪಿಯ ವಿರುದ್ಧ ನಿಂತಿರುವ ಸಂದರ್ಭದಲ್ಲೇ ಕಂಗನಾ ನೀಡಿರುವ ರೈತ ವಿರೋಧಿ ಹೇಳಿಕೆ ಪಕ್ಷವನ್ನು ಇನ್ನಷ್ಟು ಕಂಗೆಡೆಸಿದೆ.

ಹೀಗಾಗಿಯೇ ಬಿಜೆಪಿ ಈಗ ಕಂಗನಾ ಹೇಳಿಕೆಯಿಂದ ಅಂತರ ಕಾಪಾಡಿಕೊಳ್ಳುವುದರ ಜೊತೆಗೆ ಇನ್ನು ಮುಂದೆ ಇಂತಹ ಹೇಳಿಕೆ ನೀಡದಿರುವಂತೆ ಸಾರ್ವಜನಿಕ ನೋಟೀಸ್‌ ನೀಡಿದೆ. ಇದು ಬಿಜೆಪಿಗೆ ಸಾರ್ವಜನಿಕ ಮುಜುಗರ ತರುವುದರ ಜೊತೆಗೆ ಕಂಗನಾ ಅವರಿಗೂ ಸಾರ್ವಜನಿಕ ಮುಜುಗರವನ್ನು ತಂದಿದೆ.

Related Articles

ಇತ್ತೀಚಿನ ಸುದ್ದಿಗಳು