Sunday, June 16, 2024

ಸತ್ಯ | ನ್ಯಾಯ |ಧರ್ಮ

ಪಿಎಂ ಸ್ವನಿಧಿ ಯೋಜನೆಯಿಂದ ಶೇ. 41 ಮಹಿಳಾ ಫಲಾನುಭವಿಗಳು : ರಾಜ್ಯ ಬಿಜೆಪಿ ಘಟಕ

ಬೆಂಗಳೂರು : ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ  ಸ್ವನಿಧಿ ಯೋಜನೆಯ 35.39 ಲಕ್ಷ ಸಾಲ ಮಂಜೂರಿನಿಂದ  ಬೀದಿ ಬದಿ ವ್ಯಾಪಾರಿಗಳಿಗೆ ವರದಾನವಾಗುತ್ತಿದೆ ಎಂದು ರಾಜ್ಯ ಬಿಜೆಪಿ ಘಟಕ ಹೇಳಿದೆ.

ಈ ಸ್ವನಿಧಿ ಯೋಜನೆಯಲ್ಲಿ ಒಟ್ಟು ಹತ್ತು ಸಾವಿರದಿಂದ ಐವತ್ತು ಸಾವಿರ ಸಾಲ ಸೌಲಭ್ಯವಿದ್ದು, ಇದರ ಫಲಾನುಭವಿಗಳು ಶೇ 41 ರಷ್ಟು ಮಹಿಳೆಯರಾದರೆ ಶೇ.59 ರಷ್ಟು ಪುರುಷರಿದ್ದಾರೆ. ಆದರೂ ಈ ಯೋಜನೆಯ ಕುರಿತು ಟ್ವೀಟ್‌ ಮಾಡಿದ ರಾಜ್ಯ ಬಿಜೆಪಿ ಘಟಕವು  ʼಬೀದಿ ಬದಿ ವ್ಯಾಪಾರಿಗಳಿಗೆ ವರದಾನವಾಗುತ್ತಿದೆ ಮೋದಿ ಸರ್ಕಾರದ ಪ್ರಧಾನಮಂತ್ರಿ ಸ್ವನಿಧಿ ಯೋಜನೆ.ಈ ಯೋಜನೆಯಡಿ 35.39 ಲಕ್ಷ ರೂ.ಗಳ ಸಾಲ ಮಂಜೂರಾಗಿದ್ದು, ಇದರಲ್ಲಿ ಶೇ. 41 ರಷ್ಟು ಮಹಿಳಾ ಫಲಾನುಭವಿಗಳಾಗಿದ್ದಾರೆ.ʼ ಎಂದು ಹೇಳಿದೆ.

Related Articles

ಇತ್ತೀಚಿನ ಸುದ್ದಿಗಳು