ಬೆಂಗಳೂರು : ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸ್ವನಿಧಿ ಯೋಜನೆಯ 35.39 ಲಕ್ಷ ಸಾಲ ಮಂಜೂರಿನಿಂದ ಬೀದಿ ಬದಿ ವ್ಯಾಪಾರಿಗಳಿಗೆ ವರದಾನವಾಗುತ್ತಿದೆ ಎಂದು ರಾಜ್ಯ ಬಿಜೆಪಿ ಘಟಕ ಹೇಳಿದೆ.
ಈ ಸ್ವನಿಧಿ ಯೋಜನೆಯಲ್ಲಿ ಒಟ್ಟು ಹತ್ತು ಸಾವಿರದಿಂದ ಐವತ್ತು ಸಾವಿರ ಸಾಲ ಸೌಲಭ್ಯವಿದ್ದು, ಇದರ ಫಲಾನುಭವಿಗಳು ಶೇ 41 ರಷ್ಟು ಮಹಿಳೆಯರಾದರೆ ಶೇ.59 ರಷ್ಟು ಪುರುಷರಿದ್ದಾರೆ. ಆದರೂ ಈ ಯೋಜನೆಯ ಕುರಿತು ಟ್ವೀಟ್ ಮಾಡಿದ ರಾಜ್ಯ ಬಿಜೆಪಿ ಘಟಕವು ʼಬೀದಿ ಬದಿ ವ್ಯಾಪಾರಿಗಳಿಗೆ ವರದಾನವಾಗುತ್ತಿದೆ ಮೋದಿ ಸರ್ಕಾರದ ಪ್ರಧಾನಮಂತ್ರಿ ಸ್ವನಿಧಿ ಯೋಜನೆ.ಈ ಯೋಜನೆಯಡಿ 35.39 ಲಕ್ಷ ರೂ.ಗಳ ಸಾಲ ಮಂಜೂರಾಗಿದ್ದು, ಇದರಲ್ಲಿ ಶೇ. 41 ರಷ್ಟು ಮಹಿಳಾ ಫಲಾನುಭವಿಗಳಾಗಿದ್ದಾರೆ.ʼ ಎಂದು ಹೇಳಿದೆ.