Home ಬ್ರೇಕಿಂಗ್ ಸುದ್ದಿ ಪೋಕ್ಸೋ ಪ್ರಕರಣ: ಮುರುಘಾ ಮಠದ ಶಿವಮೂರ್ತಿ ನಿರ್ದೋಷಿ

ಪೋಕ್ಸೋ ಪ್ರಕರಣ: ಮುರುಘಾ ಮಠದ ಶಿವಮೂರ್ತಿ ನಿರ್ದೋಷಿ

0

ಚಿತ್ರದುರ್ಗ: ಮುರುಘಾ ಮಠದ ಹಾಸ್ಟೆಲ್‌ನ ಇಬ್ಬರು ಅಪ್ರಾಪ್ತ ವಿದ್ಯಾರ್ಥಿನಿರ ಮೇಲೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂಬ ಆರೋಪದ ಮೇಲೆ ದಾಖಲಾಗಿದ್ದ ಪೋಕ್ಸೊ ಪ್ರಕರಣದಲ್ಲಿ ಇಂದು ಚಿತ್ರದುರ್ಗ ಜಿಲ್ಲೆಯ 2ನೇ ಅಪರ ಮತ್ತು ಸತ್ರ ನ್ಯಾಯಾಲಯ ಮುರುಘಾ ಮಠದ ಶಿವಮೂರ್ತಿ ಮುರುಘಾ ಅವರನ್ನು ನಿರ್ದೋಷಿ ಎಂದು ತೀರ್ಪು ನೀಡಿದೆ.

2022ರ ಆಗಸ್ಟ್ 26ರಂದು ಮೈಸೂರಿನ ನಜರಾಬಾದ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದ್ದು, 3 ವರ್ಷಗಳ ಸುದೀರ್ಘ ತನಿಖೆ ಬಳಿಕ ನ್ಯಾಯಾಲಯ ಈ ತೀರ್ಪಿಗೆ ಬಂದಿದೆ. ಮೊದಲನೇ ಪ್ರಕರಣ ಖುಲಾಸೆಗೆ ಬಂದಿದ್ದು, ಇದರಿಂದ ಶಿವಮೂರ್ತಿ ಸಹಿತ ಎಲ್ಲ ಆರೋಪಿಗಳನ್ನು ನ್ಯಾಯಾಲಯ ಆಜ್ಞೆ ಮೂಲಕ ಮುಕ್ತಗೊಳಿಸಲಾಗಿದೆ.

ಈ ಪ್ರಕರಣದ ವೇಳೆ ಮುರುಘಾ ಶರಣರ ವಿರುದ್ಧ ಅನೇಕ ಆರೋಪ ಸೇರಿದಂತೆ ಲೇಡಿ ವಾರ್ಡನ್ ರಶ್ಮಿ, ಮಠದ ಆಡಳಿತಾಧಿಕಾರಿಗಳ ವಿರುದ್ಧವೂ ಕೇಸ್ ದಾಖಲಾಗಿತ್ತು. ಆದರೆ ಸಾಕ್ಷ್ಯಾಧಾರಗಳ ಕೊರತೆಯಿಂದ ಈ ಎಲ್ಲಾ ಆರೋಪಗಳಿಗೆ ನ್ಯಾಯಾಲಯ ನಿರ್ಧಾರ ನೀಡಿದೆ.

ಮತ್ತೊಂದು, ಬೇರೆ ಪ್ರಕರಣವಾಗಿದ್ದ 2ನೇ ಪೋಕ್ಸೊ ಕೇಸಿಗೆ ಈ ತೀರ್ಪು ಪ್ರಭಾವ ಬೀರುವುದಿಲ್ಲ ಮತ್ತು ಅದು ಪ್ರತ್ಯೇಕವಾಗಿ ಮುಂದುವರೆಯುತ್ತಿದೆ. ಮುರುಘಾ ಶ್ರೀಗೆ ಈಗಾಗಲೇ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ರಿಂದ ಜಾಮೀನು ಸಿಕ್ಕಿದ್ದು, ಪ್ರಸ್ತುತ 2ನೇ ಪ್ರಕರಣದ ವಿಚಾರಣೆಗೆ ನ್ಯಾಯಾಂಗ ಕ್ರಮಗಳು ನಡೆಯುತ್ತಿರುವುದು ತಿಳಿಸಲಾಗಿದೆ.

You cannot copy content of this page

Exit mobile version