Saturday, February 28, 2026

ಸತ್ಯ | ನ್ಯಾಯ |ಧರ್ಮ

ಕಳುವಾದ ಫೋನನ್ನು ದೊರಕಿಸಿಕೊಟ್ಟ ಪೊಲೀಸ್ ಇಲಾಖೆಗೆ ಮೆಚ್ಚುಗೆ

ಬೇಲೂರು: ಕಳೆದ ಒಂದು ವರ್ಷದ ಹಿಂದೆ ಬೇಲೂರು ಬಸ್ ನಿಲ್ದಾಣದಲ್ಲಿ ಖದೀಮರ ಕೈವಶವಾಗಿದ್ದ ಮೋಬೈಲ್ ಪೊನ್ ಇದೀಗ ವಾರಸುದಾರ ಕೈ ಸೇರಿದ್ದು ದೊರಕಿಸಿಕೊಟ್ಟ ಪೊಲೀಸ್ ಇಲಾಖೆಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಪಟ್ಟಣದ ಆಟೋ ಚಾಲಕ ಯೋಗೇಶ್ ತನ್ನ ಕುಟುಂಬದೊಂದಿಗೆ ಕಳೆದ ಒಂದು ವರ್ಷದ ಹಿಂದೆ ತಾಲೂಕಿನ ಚನ್ನಕೇಶವ ದೇವಾಲಯಕ್ಕೆ ತೆರಳುವಾಗ ಕೆ.ಎಸ್.ಆರ್. ಟಿ. ಸಿ ಬಸ್ ನಿಲ್ದಾಣದಲ್ಲಿ ಸಕ್ರಿಯರಾಗಿದ್ದ ಮೋಬೈಲ್ ಖದೀಮರು ಜೇಬಿನಲ್ಲಿದ್ದ ಮೋಬೈಲ್ ಫೋನನ್ನು ದೋಚಿ ಪರಾರಿಯಾಗಿದ್ದರು. ಇದಾದ ಬಳಿಕ ಆನ್ಲೈನ್ ಮೂಲಕ ಕಳುವಾದ ಬಗ್ಗೆ ದೂರು ದಾಖಲಿಸಿ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಮಾಹಿತಿ ನೀಡಿದ್ದ ಹಿನ್ನಲೆ ಇದೀಗ ಕಳೆದು ಹೋಗಿದ್ದ ಮೋಬೈಲ್ ಫೋನನ್ನು ಪೊಲೀಸ್ ಇಲಾಖೆ ಪತ್ತೆ ಹಚ್ಚಿ ಮರಳಿಸಿದ್ದಾರೆ. ಇದೊಂದು ಮೋಬೈಲ್ ಖದಿಮರಿಗೆ ಎಚ್ಚರಿಕೆಯ ಸಂದೇಶವಾಗಿದ್ದು ಪೂಲೀಸರ ಈ ಕಾರ್ಯಕ್ಕೆ  ಮಾಧ್ಯಮದ ಮೂಲಕ  ಅಭಿನಂದಿಸಿದ್ದಾರೆ.ಕಳುವಾದ ಫೋನನ್ನು ದೊರಕಿಸಿಕೊಟ್ಟ ಪೊಲೀಸ್ ಇಲಾಖೆಗೆ ಮೆಚ್ಚುಗೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page