Saturday, June 28, 2025

ಸತ್ಯ | ನ್ಯಾಯ |ಧರ್ಮ

ಪಂಕಜಾ ಖ್ಯಾತಿಯ ಶೆಫಾಲಿ ಜರಿವಾಲಾ ಸಾವು: ಗಂಡನ ಮೇಲೆ ಪೊಲೀಸರ ಅನುಮಾನ!

ಕನ್ನಡದ ಹುಡುಗರು ಚಿತ್ರದ ‘ಪಂಕಜಾʼ ಹಾಡಿನ ಖ್ಯಾತಿಯ ನಟಿ ಶೆಫಾಲಿ ಜರಿವಾಲಾ ಸಾವಿನ ಬಗ್ಗೆ ಅನುಮಾನಗಳು ವ್ಯಕ್ತವಾಗುತ್ತಿವೆ. ಶುಕ್ರವಾರ ರಾತ್ರಿ ಅವರು ಹೃದಯಾಘಾತದಿಂದ ನಿಧನರಾದರು ಎಂಬ ಸುದ್ದಿ ಹರಡಿತ್ತು.

ಆದರೆ ಅವರ ಸಾವಿನ ಬಗ್ಗೆ ಅನುಮಾನಗಳಿವೆ ಎಂದಿರುವ ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿರುವುದಾಗಿ ಹೇಳಿದ್ದಾರೆ.

ಶೆಫಾಲಿ ಜರಿವಾಲಾ ಸಾವಿನ ಸುದ್ದಿ ಕೇಳಿ ಅಭಿಮಾನಿಗಳು ಮತ್ತು ಕುಟುಂಬ ಸದಸ್ಯರು ಆಘಾತಕ್ಕೊಳಗಾಗಿದ್ದರೆ. ಶನಿವಾರ ಬೆಳಿಗ್ಗೆ ಅವರ ಪತಿ ಅಪಾರ್ಟ್ಮೆಂಟ್ ಮುಂದೆ ತನ್ನ ನಾಯಿಯೊಂದಿಗೆ ನಡೆದುಕೊಂಡು ಹೋಗುತ್ತಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಇದು ಪೊಲೀಸರಲ್ಲಿ ಅನುಮಾನಗಳನ್ನು ಹುಟ್ಟುಹಾಕಿದೆ.

ಮುಂಬೈ ಪೊಲೀಸರು ಈಗಾಗಲೇ ಅವರ ಮನೆಯನ್ನು ಸಂಪೂರ್ಣವಾಗಿ ಪರಿಶೀಲಿಸಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ. ಅವರ ಸಾವಿನ ಹಿಂದೆ ಬಲವಾದ ಕಾರಣಗಳಿವೆ ಎಂದು ಪೊಲೀಸರು ಅನುಮಾನಿಸುತ್ತಿದ್ದಾರೆ.

ಶುಕ್ರವಾರ ಬೆಳಗಿನ ಜಾವ 1 ಗಂಟೆಗೆ ಪೊಲೀಸರಿಗೆ ಸಾವಿನ ಕುರಿತು ಮಾಹಿತಿ ದೊರಕಿದೆ. ಅಂಧೇರಿಯಲ್ಲಿರುವ ಶೆಫಾಲಿಯವರ ಮನೆಯಲ್ಲಿ ಶವವನ್ನು ಪರೀಕ್ಷಿಸಿ, ಅಲ್ಲಿಂದ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಆರಂಭದಲ್ಲಿ, ಶೆಫಾಲಿ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಪೊಲೀಸರು ಅವರ ಸಾವಿನ ಬಗ್ಗೆ ಅನುಮಾನಗಳಿವೆ ಎಂದು ಹೇಳಿದ್ದಾರೆ.

ವಿಧಿವಿಜ್ಞಾನ ತಜ್ಞರು ಅಪಾರ್ಟ್ಮೆಂಟ್ ಪರಿಶೀಲಿಸುತ್ತಿದ್ದಾರೆ. ಅಡುಗೆಯವರು ಮತ್ತು ಮನೆಕೆಲಸಗಾರರನ್ನು ಸಹ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಶನಿವಾರ ಬೆಳಿಗ್ಗೆ, ಶೆಫಾಲಿಯವರ ಪತಿ ತನ್ನ ಸಾಕು ನಾಯಿಯೊಂದಿಗೆ ಅಪಾರ್ಟ್ಮೆಂಟ್ ಮುಂದೆ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಇದು ಸಾವಿನ ಕುರಿತು ಹಲವು ಪ್ರಶ್ನೆಗಳನ್ನು ಮೂಡಿಸಿದೆ.

2015ರಲ್ಲಿ ಪರಾಗ್ ತ್ಯಾಗಿ ಎನ್ನುವವರೊಂದಿಗೆ ಮದುವೆಯಾಗಿದ್ದ ಕಾಂಟಾ ಲಗಾ ಹಾಡಿನ ಖ್ಯಾತಿ ಶೆಫಾಲಿ ತನ್ನ ಪತಿಯೊಂದಿಗೆ ‘ನಾಚ್ ಬಲಿಯೇ’ ಸೀಸನ್ 5 ಮತ್ತು 7 ರಲ್ಲಿ ಕಾಣಿಸಿಕೊಂಡಿದ್ದರು.

https://x.com/Itsmesonu_/status/1938686007731191975

Related Articles

ಇತ್ತೀಚಿನ ಸುದ್ದಿಗಳು

You cannot copy content of this page