ಪೊಲೀಸ್‌ ಹುತಾತ್ಮರ ದಿನ : ಅವರ ತ್ಯಾಗವನ್ನು ಸ್ಮರಿಸಿದ ಡಿಕೆಶಿ

ಬೆಂಗಳೂರು : ಅಕ್ಟೋಬರ್‌ 21 ರ ಪೊಲೀಸ್‌ ಹುತಾತ್ಮರ ದಿನದ ಅಂಗವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ರವರು ಪೊಲೀಸರ ತ್ಯಾಗವನ್ನು ಸ್ಮರಿಸಿ ಟ್ಚೀಟ್‌ ಮಾಡಿ ಗೌರವ ಸೂಚಿಸಿದ್ದಾರೆ.

ನಾಗರಿಕ ರಕ್ಷಣೆಗಾಗಿ ಪ್ರಾಣದ ಹಂಗು ತೊರೆದು ಹಂಗು ತೊರೆದು ಹುತಾತ್ಮರಾದ ಪೊಲೀಸರಿಗೆ ಗೌರವ ಸೂಚಿಸುವ ಸಲುವಾಗಿ ಅಕ್ಟೋಬರ್‌ 21ರಂದು ನಾಡಿನಾದ್ಯಂತ  ಪೊಲೀಸ್‌ ಹುತಾತ್ಮರ ದಿನವಾಗಿ ಆಚರಿಸಲಾಗುತ್ತದೆ.

ಈ ಕುರಿತು ಟ್ಚೀಟ್‌ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ʼಸಮಾಜದ ಶಾಂತಿ, ಕೋಮು ಸೌಹಾರ್ದತೆ, ಭದ್ರತೆ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಪಾತ್ರ ಪ್ರಮುಖವಾದದ್ದು. ಸಮಾಜದ ಸ್ವಾಸ್ಥ್ಯದ ಉಳಿವಿಗಾಗಿ ಹುತಾತ್ಮರಾದ ಪೊಲೀಸರ ತ್ಯಾಗವನ್ನು ಸ್ಮರಿಸಿ ‘ಪೊಲೀಸ್ ಹುತಾತ್ಮರ ದಿನ’ದಂದು ಅವರಿಗೆ ಗೌರವ ನಮನಗಳನ್ನು ಸಲ್ಲಿಸುತ್ತೇನೆʼ ಎಂದು ಗೌರವ ಸಲ್ಲಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು