Home ಬೆಂಗಳೂರು  ಮೊಬೈಲ್ ರಿಚಾರ್ಜ್ ಸುಲಿಗೆಗೆ – ಶೇ 15 ರಷ್ಟು ದರಕಡಿತ ಸಾದ್ಯತೆ

 ಮೊಬೈಲ್ ರಿಚಾರ್ಜ್ ಸುಲಿಗೆಗೆ – ಶೇ 15 ರಷ್ಟು ದರಕಡಿತ ಸಾದ್ಯತೆ

0

ಇತ್ತೀಚೆಗೆ ಶೇಕಡಾ 15 ರಿಂದ 25 ರಷ್ಟು ಹೆಚ್ಚಾದ ಮೊಬೈಲ್ ರೀಚಾರ್ಜ್ (Mobile Recharge) ದರಗಳಿಂದ ಕಂಗೆಟ್ಟಿದ್ದ ಜನಸಾಮಾನ್ಯರಿಗೆ ಕೇಂದ್ರ ಸರ್ಕಾರ (Central Govt) ಬಿಗ್ ರಿಲೀಫ್ ನೀಡಲು ಮುಂದಾಗಿದೆ. ದೇಶದ ಪ್ರಮುಖ ಟೆಲಿಕಾಂ ಕಂಪನಿಗಳಾದ (Telecom Companies) ಜಿಯೋ, ಏರ್‌ಟೆಲ್ ಹಾಗೂ ವೊಡಾಫೋನ್-ಐಡಿಯಾ ಬಳಕೆದಾರರಿಗೆ ಹೊರೆಯಾಗಿರುವ ಮಾಸಿಕ ಯೋಜನೆಗಳ ದರವನ್ನು ತಗ್ಗಿಸಲು ಸರ್ಕಾರ ವಿಶೇಷ ಯೋಜನೆಯೊಂದನ್ನು ಸಿದ್ಧಪಡಿಸುತ್ತಿದೆ.

ದರ ಏರಿಕೆಯಿಂದಾಗಿ ಗ್ರಾಮೀಣ ಹಾಗೂ ಬಡ ವರ್ಗದ ಗ್ರಾಹಕರು ತೀವ್ರ ಸಂಕಷ್ಟಕ್ಕೆ ಈಡಾಗಿದ್ದು, ಹಲವರು ಸಿಮ್ ಬಂದ್ ಮಾಡುವ ನಿರ್ಧಾರಕ್ಕೂ ಬಂದಿದ್ದರು. ಈ ವಿಚಾರ ಸಂಸತ್ತಿನಿಂದ ಹಿಡಿದು ಸಾಮಾಜಿಕ ಜಾಲತಾಣಗಳವರೆಗೆ ಭಾರಿ ಸದ್ದು ಮಾಡಿತ್ತು. ಸಾರ್ವಜನಿಕರ ಈ ಆಕ್ರೋಶವನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಈಗ ಟ್ರಾಯ್ (TRAI) ಹಾಗೂ ಟೆಲಿಕಾಂ ಸಂಸ್ಥೆಗಳ ಜೊತೆ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹೆಜ್ಜೆ ಇಟ್ಟಿದೆ.

ಟೆಲಿಕಾಂ ಸಚಿವಾಲಯ ಮತ್ತು ನೀತಿ ಆಯೋಗದ ಪ್ರಕಾರ, ಟೆಲಿಕಾಂ ಕಂಪನಿಗಳ ಮೇಲಿರುವ ತೆರಿಗೆ ಹಾಗೂ ಲೈಸೆನ್ಸ್ ಶುಲ್ಕದ ಹೊರೆಯನ್ನು ಕಡಿಮೆ ಮಾಡಲು ಸರ್ಕಾರ ನಿರ್ಧರಿಸಿದೆ. ಪ್ರಸ್ತುತ ಈ ಕಂಪನಿಗಳು ತಮ್ಮ ಒಟ್ಟು ಆದಾಯದ ಶೇಕಡಾ 8 ರಷ್ಟು ಮೊತ್ತವನ್ನು ಲೈಸೆನ್ಸ್ ಫೀಸ್ ಹಾಗೂ ಸ್ಪೆಕ್ಟ್ರಮ್ ಬಳಕೆ ಶುಲ್ಕವಾಗಿ ಪಾವತಿಸುತ್ತಿವೆ. ಇದನ್ನು ಶೇಕಡಾ 3 ರಿಂದ 4 ಕ್ಕೆ ಇಳಿಸುವ ಯೋಜನೆ ರೂಪಿಸಲಾಗಿದೆ. ಜೊತೆಗೆ ಗ್ರಾಮೀಣ ಇಂಟರ್ನೆಟ್ ವಿಸ್ತರಣೆಗೆ ಹೋಗುವ ಯುಎಸ್‍ಒ (USO) ಫಂಡ್ ಸಂಗ್ರಹಕ್ಕೂ ತಾತ್ಕಾಲಿಕ ತಡೆ ನೀಡಲು ಚಿಂತಿಸಲಾಗುತ್ತಿದೆ.

ಸರ್ಕಾರದಿಂದ ಈ ರೀತಿಯ ತೆರಿಗೆ ವಿನಾಯಿತಿ ಸಿಕ್ಕ ತಕ್ಷಣವೇ ಟೆಲಿಕಾಂ ಸಂಸ್ಥೆಗಳು ತಮ್ಮ ರೀಚಾರ್ಜ್ ಪ್ಲಾನ್‌ಗಳ ಬೆಲೆಯನ್ನು ಶೇಕಡಾ 10 ರಿಂದ 15 ರಷ್ಟು ಇಳಿಕೆ ಮಾಡಲಿವೆ. ಇದರಿಂದ ಪ್ರಸ್ತುತ 299 ರೂಪಾಯಿ ಇರುವ ಮಾಸಿಕ ಪ್ಲಾನ್ ಬೆಲೆ ಸುಮಾರು 250 ರೂಪಾಯಿಗೆ ಇಳಿಯಲಿದ್ದು, ವಾರ್ಷಿಕ ಪ್ಲಾನ್‌ಗಳ ಮೇಲೆ ಗ್ರಾಹಕರಿಗೆ 300 ರಿಂದ 400 ರೂಪಾಯಿಯವರೆಗೆ ಉಳಿತಾಯವಾಗಲಿದೆ.

You cannot copy content of this page

Exit mobile version