ಇಂಡಿಯನ್ ಪ್ರೀಮಿಯರ್ ಲೀಗ್ 2025 ರ ಪಂದ್ಯ ಸಂಖ್ಯೆ-13 ರಲ್ಲಿ ನಿನ್ನೆ ಲಕ್ನೋ ಸೂಪರ್ ಜೈಂಟ್ಸ್ (LSG) ಮತ್ತು ಪಂಜಾಬ್ ಕಿಂಗ್ಸ್ (PBKS) ನಡುವಿನ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಲಕ್ನೋ ವಿರುದ್ಧ ಭರ್ಜರಿ ಗೆಲುವು ಸಾಧಿಸಿತು.
ನಿಗದಿತ 16.2 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿತು. ಈ ಪಂದ್ಯದಲ್ಲಿ ಪಂಜಾಬ್ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡು ಲಕ್ನೋ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿತು. ಪಂಜಾಬ್ ಕಿಂಗ್ಸ್ ತಂಡವು ವೇಗಿಗಳ ದಾಳಿಯಿಂದಾಗಿ ಪವರ್ ಪ್ಲೇನಲ್ಲಿ 3 ನಿರ್ಣಾಯಕ ವಿಕೆಟ್‌ಗಳನ್ನು ಕಳೆದುಕೊಂಡಿತು. ಲಕ್ನೋ ಸೂಪರ್‌ಜೈಂಟ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 171 ರನ್ ಗಳಿಸಿತು.
ಪಂಜಾಬ್ ಕಿಂಗ್ಸ್ ತಂಡದ ಆರಂಭಿಕ ಆಟಗಾರ ಪ್ರಭ್ಸಿಮ್ರನ್ ಸಿಂಗ್ (61) ಅಬ್ಬರದ ಆಟದ ಮೂಲಕ ಸಿಕ್ಸರ್ ಮತ್ತು ಬೌಂಡರಿಗಳನ್ನು ಬಾರಿಸಿ ಅರ್ಧಶತಕ ಗಳಿಸಿದರು. ಅಯ್ಯರ್ ಮತ್ತು ನೆಹಾಲ್ ಅವರ ಉತ್ತಮ ಆಟದಿಂದ ಪಂಜಾಬ್ 8 ವಿಕೆಟ್‌ಗಳಿಂದ ಜಯಗಳಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ತಂಡಕ್ಕೆ ಅರ್ಶ್ದೀಪ್ ಸಿಂಗ್ ಆರಂಭದಿಂದಲೇ ಆಘಾತ ನೀಡಿದರು. ಮೊದಲ ಓವರ್‌ನ ನಾಲ್ಕನೇ ಎಸೆತದಲ್ಲಿ ಮಿಚೆಲ್ ಮಾರ್ಷ್ ವಿಕೆಟ್ ಕಳೆದುಕೊಂಡರು. ನಂತರ ಮಾರ್ಕ್ರಾಮ್ 28 ರನ್ ಗಳಿಸಿ ನಾಲ್ಕನೇ ಓವರ್‌ನಲ್ಲಿ ಔಟಾದರು. ಮುಂದಿನ ಓವರ್‌ನಲ್ಲಿಯೇ ಮ್ಯಾಕ್ಸ್‌ವೆಲ್ ಪಂತ್ ಅವರನ್ನು ಔಟ್ ಮಾಡಿದರು. ಪಂತ್ ಕೇವಲ 2 ರನ್ ಗಳಿಸಿದರು.
ನಂತರ ಪುರಾನ್ ಕೆಲವು ಉತ್ತಮ ಹೊಡೆತಗಳನ್ನು ನೀಡಿದರು ಮತ್ತು ಚಹಾಲ್ ಬೌಲಿಂಗ್‌ನಲ್ಲಿ ಔಟಾದ ಅವರು 44 ರನ್ ಗಳಿಸಿದರು. 16ನೇ ಓವರ್‌ನಲ್ಲಿ ಡೇವಿಡ್ ಮಿಲ್ಲರ್ ಔಟಾದರು. ಮಿಲ್ಲರ್ 19 ರನ್‌ಗಳ ಇನ್ನಿಂಗ್ಸ್ ಆಡಿದರು. ಬಡೋನಿ 41 ರನ್ ಮತ್ತು ಸಮದ್ 27 ರನ್ ಗಳಿಸಿದರು.