Home ರಾಜ್ಯ ಚಾಮರಾಜನಗರ ಅಸ್ಪೃಶ್ಯತೆ ಆಚರಣೆ : ʼಮೇಲ್ಜಾತಿʼ ವ್ಯಕ್ತಿಯ ವಿರುದ್ದ SC/ST ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲು

ಅಸ್ಪೃಶ್ಯತೆ ಆಚರಣೆ : ʼಮೇಲ್ಜಾತಿʼ ವ್ಯಕ್ತಿಯ ವಿರುದ್ದ SC/ST ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲು

0

ಚಾಮರಾಜನಗರ : ದಲಿತ ಮಹಿಳೆ ಮೇಲೆ ಅಸ್ಪೃಶ್ಯತೆ ಆಚರಣೆ ಮಾಡಿ, ಜಾತಿ ನಿಂದನೆ ಮಾಡಿದ ಮೇಲ್ಜಾತಿ ವ್ಯಕ್ತಿಯ ವಿರುದ್ಧ ಪರಿಶಿಷ್ಟ ಜಾತಿ/ವರ್ಗದ ದೌರ್ಜನ್ಯ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ.

ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಪಂಚಾಯತ್‌ ಉಪ ನಿರ್ದೇಶಕರು ಅಲ್ಲಿನ ಆಯುಕ್ತರಿಗೆ ಈ ಪ್ರಕರಣದ  ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ʼಈ ಅಸ್ಪೃಶ್ಯತೆ ಆಚರಣೆಯ ಕುರಿತು ತಹಶಿಲ್ದಾರರು, ಉಪ ವಿಭಾಗಾಧಿಕಾರಿಗಳು, ಪೊಲೀಸ್‌ ಅಧಿಕಾರಿಕಾರು ಸೇರಿದಂತೆ ಎಲಾ ಜಾತಿಯ ಮುಖಂಡರುಗಳೊಡನೆ ಸಭೆ ನಡೆಸಿದ್ದು, ಹೆಗ್ಗೋಠಾರಕ್ಕೆ ಭೇಟಿ ನೀಡಿ ಗ್ರಾಮಸ್ಥರನ್ನು ಖುದ್ದು ಕರೆದೊಯ್ದು ನೀರು ಕುಡಿಸಿರುವ ಬಗ್ಗೆ ತಿಳಿಸಿದ್ದಾರೆ.

ಹೆಗ್ಗೊಠಾರ ಗ್ರಾಮದಲ್ಲಿ ಅಂದಾಜು ಪರಿಶಿಷ್ಟ ಜನಾಂಗದವರ 200 ಮನೆಗಳು, 650 ಜನ ಪರಿಶಿಷ್ಟ ಜಾತಿಯ ಜನಸಂಖ್ಯೆ (ಪರಿಶಿಷ್ಟ ಪಂಗಡದ 180 ಕುಟುಂಬ , ಜನಸಂಖ್ಯೆ 500) ಪರಿಶಿಷ್ಟಜಾತಿ ಕುಟುಂಬದ ಗ್ರಾಮಕ್ಕೆ ಪೂರ್ಣವಾಗಿ ನೀರಿನ ಮೂಲ ಒಂದೇ ಆಗಿರುತ್ತದೆ ಆದರೆ ಸದರಿ ನೀರು ವಿವಿಧ ಸ್ವರೂಪದಲ್ಲಿ ಹರಿಯುತ್ತದಿರುವ ನೀರನ್ನು ವಿವಿಧ ಸಮುದಾಯದವರು ಬಳಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಗ್ರಾಮದಲ್ಲಿನ ಒಟ್ಟು 42 ನೀರಿನ ತೊಂಬೆಗಳಲ್ಲಿ ಪಂಚಾಯತ್‌ ವತಿಯಿಂದ ಸಾರ್ವಜನಿಕರು ಉಪಯೋಗಿಸುವ ನೀರಿನ ಟ್ಯಾಂಕರ್‌ ಎಂದು ನಾಮಫಲಕ ಹಾಕಿಸಲು ಕ್ರಮ ವಹಿಸಲಾಗಿದ್ದು, ಈ ಕುರಿತು ಗ್ರಾಮಸ್ಥ ಗಿರಿಯಪ್ಪನವರ ದೂರಿನ ಆಧಾರದಲ್ಲಿʼಮೇಲ್ಜಾತಿʼಯ ಮಹದೇವಪ್ಪನವರ ಮೇಲೆ ಪರಿಶಿಷ್ಟ ಜಾತಿ/ವರ್ಗದ ದೌರ್ಜನ್ಯ ಕಾಯ್ದೆಯಡಿಯಲ್ಲಿ The SC/ST(Prevention of Atrocities) Amendent Act 2015(U/s-3(1)(za)(A)) ರಂತೆ ಚಾಮರಾಜನಗರದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಲ್ಲಿನ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಿಗೆ ತಿಳಿಸಿದ್ದಾರೆ.

ಚಾಮರಾಜನಗರದ ಹೆಗ್ಗೊಠಾರ ಗ್ರಾಮದಲ್ಲಿ ಸಂಬಂಧಿಕರ ಮದುವೆಗೆಂದು ದಲಿತ ಮಹಿಳೆಯೊಬ್ಬಳು ಬಾಯಾರಿಕೆಯಿಂದ  ಅಲ್ಲಿಯೇ ಇದ್ದ ಟ್ಯಾಂಕರ್‌ನ ನಲ್ಲಿಯಲ್ಲಿ ನೀರು ಕುಡಿದಿದ್ದಳು. ಅದನ್ನು ಗಮನಿಸಿದ ವೀರಶೈವ ಮುಖಂಡನಾದ ಮಹದೇವಪ್ಪ(ಪಟ್ಟವಾಡಿ) ಎಂಬ ವ್ಯಕ್ತಿಯು, ʼನೀನು ಯಾವ ಜನಾಂಗದ ಮಹಿಳೆʼ ಎಂದು ಕೇಳಿದಾಗ ʼನಾನು ಪರಿಶಿಷ್ಟ ಜನಾಂಗದ ಮಹಿಳೆʼ ಎಂದು ಉತ್ತರಿಸಿದ್ದು, ʼ ಇದು ವೀರಶೈವರಿಗೆ ಸೇರಿದ ತೊಂಬೆ. ನೀವು ದಲಿತರು. ಇಲ್ಲಿಗೆ ಬಂದು ನೀರು ಕುಡಿದು ನಮ್ಮ ತೊಂಬೆಗಳನ್ನು ಮಲೀನ ಮಾಡಿದ್ದೀರಾʼ ಎಂದು ಗಲಾಟೆ ಮಾಡಿ ಜಾರಿ ನಿಂದನೆ ಮಾಡಿದ್ದನು. ಈ ಬಗ್ಗೆ ಚಾಮಾರಾಜನಗರದ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ FIR ದಾಖಲಿಲಾಗಿತ್ತು.

You cannot copy content of this page

Exit mobile version