Saturday, April 27, 2024

ಸತ್ಯ | ನ್ಯಾಯ |ಧರ್ಮ

ಅಸ್ಪೃಶ್ಯತೆ ಪದ ಬಳಕೆ: ಹೆಚ್‌ಡಿಕೆ ವಿರುದ್ಧ ದೂರು

ದೊಡ್ಡಬಳ್ಳಾಪುರ:ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಖಾಸಗಿ ವಾಹಿನಿಗೆ ಸಂದರ್ಶನ ಕೊಡುವ ಸಮಯದಲ್ಲಿ ʼಸಿಎಂ ಇಬ್ರಾಹಿಂ ಅಸ್ಪೃಶ್ಯರಲ್ಲʼ ಎಂಬ ಸಂವಿಧಾನ ವಿರೋಧಿ ಪದ ಬಳಕೆ ಮಾಡಿರುವುದರ ವಿರುದ್ಧ ದಲಿತ ಸಂಘಟನೆಯ ಮುಖಂಡರು ದೊಡ್ಡಬಳ್ಳಾಪುರ ಉಪವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ದೂರು ನೀಡಿದ್ದಾರೆ.

ನವೆಂಬರ್ 27 ರಂದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದ ಪಂಚರತ್ನ ರಥಯಾತ್ರೆ ನಡೆಯುತ್ತಿದ್ದ ಸಂದರ್ಭದಲ್ಲಿ ಕುಮಾರಸ್ವಾಮಿ ಅವರು ಖಾಸಗಿ ವಾಹಿನಿಗೆ ಚುಟುಕು ಸಂದರ್ಶನ ನೀಡಿದ್ದು, ಆ ಸಮಯದಲ್ಲಿ ಅಸ್ಪೃಶ್ಯ ಎಂಬ ಪದ ಬಳಕೆ ಮಾಡಿದ್ದು, ಈ ವಿರುದ್ಧ ದಲಿತ ಮುಖಂಡರ ಕೆಂಗಣ್ಣಿಗೆ ಹೆಚ್‌ಡಿಕೆ ಕಾರಣರಾಗಿದ್ದಾರೆ. 

ಸಂದರ್ಶನದ ಸಮಯದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿಯವರು, ʼಪತ್ರಕರ್ತ ಸಿಎಂ ಇಬ್ರಾಹಿಂ ಮುಖ್ಯಮಂತ್ರಿಯಾಗುತ್ತಾರಾ ? ಎಂಬ ಪತ್ರಕರ್ತನ  ಪ್ರಶ್ನೆಗೆ ಉತ್ತರ ನೀಡುವ ಸಮಯದಲ್ಲಿ ಕುಮಾರಸ್ವಾಮಿ ಸಿಎಂ ಇಬ್ರಾಹಿಂ ಅಸ್ಪೃಶ್ಯರಲ್ಲ ಎಂಬ ಪದ ಬಳಕೆ ಮಾಡಿದ್ದಾರೆ. ಇದು ಸಂವಿಧಾನದ ವಿರೋಧಿ ಹೇಳಿಕೆಯಾಗಿದ್ದು, ಈ ವಿರುದ್ದ ದಲಿತ ಮುಖಂಡರಾದ ರಾಜಸಣ್ಣಕ್ಕಿ ಮತ್ತು ಗೂಳ್ಯ ಹನುಮಣ್ಣ ಅವರು ವಿರೋಧ ವ್ಯಕ್ತಪಡಿಸಿದ್ದಾರೆ.

ಹೆಚ್‌ಡಿಕೆಯವರ ಹೇಳಿಕೆಯು ಕಾನೂನು ಬಾಹಿರವಾಗಿದ್ದು, ಇದಕ್ಕೆ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದಲ್ಲದೇ ಈ ವಿರುದ್ದ ದೊಡ್ಡಬಳ್ಳಾಪುರ ಉಪ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ  ದೂರು ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು