ಪಟ್ನಾ: ಬಿಹಾರದ ನೂತನ ಮುಖ್ಯಮಂತ್ರಿ ನಿತೀಶ್ ಕುಮಾರ್, ನಾವು ನರೇಂದ್ರ ಮೋದಿಯವರನ್ನು 2024ರ ಚುನಾವಣೆಯಲ್ಲಿ ನೋಡಿಕೊಳ್ಳುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿಗೆ ನೇರವಾಗಿ ಸವಾಲು ಹಾಕಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿತೀಶ್ ಕುಮಾರ್ ಇನ್ನೊಮ್ಮೆ ಮೋದಿ ಪ್ರಧಾನಿಯಾಗಲು ನಾವು ಬಿಡುವುದಿಲ್ಲ. 2024ರ ಚುನಾವಣೆ 2014ರಂತೆ ಇರುವುದಿಲ್ಲ. ಪ್ರತಿಪಕ್ಷಗಳನ್ನೆಲ್ಲ ಒಗ್ಗೂಡಿಸುವುದರ ಜೊತೆಗೆ ಪ್ರತಿಪಕ್ಷ ದುರ್ಬಲ ಆಗಲು ಇನ್ನುಮುಂದೆ ಬಿಡುವುದಿಲ್ಲ. 2014ರಲ್ಲೇನೋ ನರೇಂದ್ರ ಮೋದಿ ಗೆದ್ದರು, ಆದರೆ 2024ರಲ್ಲಿ ಗೆಲ್ಲುವುದು ಅಷ್ಟು ಸುಲಭವೇ? ಎಂದು ಪ್ರಶ್ನಿಸುವುದರ ಮೂಲಕ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.