Monday, June 30, 2025

ಸತ್ಯ | ನ್ಯಾಯ |ಧರ್ಮ

ಪ್ರಜಾವಾಣಿಗೆ 75ರ ಸಂಭ್ರಮ

ಕರ್ನಾಟಕ ರಾಜಕೀಯ ಪತ್ರಿಕೋದ್ಯಮ ಇತಿಹಾಸದಲ್ಲಿ ತಮ್ಮದೇ ವಿಶಿಷ್ಟ ಛಾಪು ಮೂಡಿಸಿದ ಕನ್ನಡದ ಜನಪ್ರಿಯ ಸುದ್ದಿ ಪತ್ರಿಕೆ ಪ್ರಜಾವಾಣಿಗೆ 75ರ ಸಂಭ್ರಮ.

ಪ್ರಜಾವಾಣಿ ಕರ್ನಾಟಕದ ಪ್ರಮುಖ ದಿನಪತ್ರಿಕೆ. ಕರ್ನಾಟಕದ ದಕ್ಷಿಣ ಜಿಲ್ಲೆಗಳಲ್ಲಿ ಈ ಪತ್ರಿಕೆ ಬಹಳವಾಗಿ ಜನಪ್ರಿಯವಾಗಿದೆ. ಪ್ರಜಾವಾಣಿಯಲ್ಲಿ ಪ್ರಚಲಿತ ರಾಜಕೀಯ, ಆರ್ಥಿಕ ವಿಷಯಗಳನ್ನು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚಿಸಲಾಗುತ್ತದೆ.

1948 ರಲ್ಲಿ ಇಂಗ್ಲಿಷ್ ದಿನಪತ್ರಿಕೆ “ಡೆಕ್ಕನ್ ಹೆರಾಲ್ಡ್”ನೊಂದಿಗೆ, ಶ್ರೀ ಕೆ.ಎನ್. ಗುರುಸ್ವಾಮಿಯವರ ಮಾಲೀಕತ್ವದ ದಿ ಪ್ರಿಂಟರ್ಸ್ ಮೈಸೂರು ಲಿಮಿಟೆಡ್‌ ಸಂಸ್ಥೆಯು ಪ್ರಜಾವಾಣಿ ಪತ್ರಿಕೆಯನ್ನು ಪ್ರಾರಂಭಿಸಿತು.

75 ವರ್ಷ ಪೂರೈಸಿರುವ ಈ ಪತ್ರಿಕೆ ಮತ್ತು ತಂಡಕ್ಕೆ ಪೀಪಲ್‌ ಮೀಡಿಯಾ ಶುಭ ಕೋರುತ್ತದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page