Friday, January 16, 2026

ಸತ್ಯ | ನ್ಯಾಯ |ಧರ್ಮ

BIG NEWS : ಪ್ರಜ್ವಲ್ ರೇವಣ್ಣ ಅಶ್ಲೀಲ ಪೆನ್ ಡ್ರೈವ್ ವಿಡಿಯೋಗಳು ಅಸಲಿ ; FSL ರಿಪೋರ್ಟ್

ಲೈಂಗಿಕ ದೌರ್ಜನ್ಯ ಮತ್ತು ಅಶ್ಲೀಲ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣನಿಗೆ ಸಂಬಂಧಿಸಿದ್ದು ಎನ್ನಲಾದ ಎಲ್ಲಾ ವಿಡಿಯೋಗಳು ಅಸಲಿ ಎಂಬ ಮಾಹಿತಿ ಹೊರಬಿದ್ದಿದೆ.

ಪ್ರಜ್ವಲ್ ರೇವಣ್ಣನ ಬಳಸಿಕೊಂಡಿದ್ದ ವಿಡಿಯೋಗಳು ಯಾವವೂ ತಿರುಚಲಾಗಿಲ್ಲ ಎಂದು FSL (ವಿಧಿ ವಿಜ್ಞಾನ ಪ್ರಯೋಗಾಲಯ) ವರದಿ ನೀಡಿದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದ ವಿಡಿಯೋಗಳಲ್ಲಿ ಪುರಷನ ಮುಖ ಸ್ಪಷ್ಟವಾಗಿ ಕಂಡುಬಂದಿಲ್ಲ. ಹೀಗಾಗಿ ವಿಡಿಯೋದಲ್ಲಿರುವ ವ್ಯಕ್ತಿ ಯಾರು ಎಂಬುವುದು ತನಿಖೆಯ ಬಳಿಕವೇ ತಿಳಿದುಬರಲಿದೆ.

ತನಿಖೆ ನಡೆಸುತ್ತಿರುವ ಎಸ್​​ಐಟಿ ತಂಡ ಪೆನ್‌ಡ್ರೈವ್‌ಗಳಿಂದ ಸಾಕಷ್ಟು ಅಶ್ಲೀಲ ವಿಡಿಯೋಗಳನ್ನು ಸಂಗ್ರಹ ಮಾಡಿತ್ತು. ಈ ವಿಡಿಯೋಗಳು ಅಸಲಿಯೋ, ನಕಲಿಯೋ ಎಂದು ತಿಳಿಯಲು ವಿಧಿ ವಿಜ್ಞಾನ ಲ್ಯಾಬ್​​​ ಗೆ ಕಳುಹಿಸಲಾಗಿತ್ತು. ಇದೀಗ ಇದರ ರಿಪೋರ್ಟ್ ಬಂದಿದ್ದು, ಎಲ್ಲಾ ವಿಡಿಯೋಗಳು ಮತ್ತು ಫೋಟೋಗಳು ಅಸಲಿ ಎಂದು ಗೊತ್ತಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page