ಮಂಗಳೂರು: ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿಯವರು ತನ್ನ ಬಗ್ಗೆ ಆಗಿರುವ ಟ್ರೋಲ್ ವಿಚಾರವಾಗಿ ದೂರು ನೀಡಿದ್ದು, ಪ್ರಕರಣಕ್ಕೆ ಸಂಬಂಧಪಟ್ಟ ಎರಡನೇ ಆರೋಪಿಯಾದ ಕೆ.ಆರ್ ಶೆಟ್ಟಿ ಇಂದು ನ್ಯಾಯಾಲಯಕ್ಕೆ ಹಾಜರಾಗಿದ್ದಾನೆ.
ಇತ್ತೀಚೆಗೆ ನಡೆದ ಸೂರತ್‌ಕಲ್ ಟೋಲ್ ಗೇಟ್ ತೆರವು ಹೋರಾಟದಲ್ಲಿ ತೊಡಗಿಸಿಕೊಂಡಿದ್ದ ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ಟೋಲ್ ಗೇಟ್ ವಿರೋದಿ ಹೋರಾಟದ ಸಂದರ್ಭದಲ್ಲಿ ನೆಲದ ಮೇಲೆ ಬಿದ್ದಿರುವ ಪ್ರತಿಭಾ ಕುಳಾಯಿ ಅವರನ್ನು ಪೊಲೀಸರು ಎಳೆಯುತ್ತಿರುವ ಫೋಟೋವೊಂದನ್ನು ಫೇಸ್ಬುಕ್ಕಿನಲ್ಲಿ ಹಂಚಿಕೊಂಡಿದ್ದ ಕೆ.ಆರ್.ಶೆಟ್ಟಿ ಅಡ್ಯಾರ್ ಪದವು ಎಂಬ ವ್ಯಕ್ತಿಯ ಪೋಸ್ಟನ್ನು ಆರೆಸ್ಸೆಸ್ ಬಿಜೆಪಿ ಬೆಂಬಲಿತ ಕಹಳೆ ನ್ಯೂಸ್ ಸಂಪಾದಕ ಶ್ಯಾಮ ಸುದರ್ಶನ್ ಭಟ್ ಹೊಸಮೂಲೆ ಹಂಚಿಕೊಂಡಿದ್ದ. ಅದರಲ್ಲಿ ಅವನು “ಮಲಗಿ ಒಳ್ಳೆ ಅಭ್ಯಾಸ ಉಂಟು ಮಾರ್ರೆ, #ಓರಾಟ, #ಪ್ರತಿಭೆ #ಕುಳಾಯಿ ಎಂದು ರೇಪಿಸ್ಟ್ ಭಾಷೆಯಲ್ಲಿ ಬರೆದುಕೊಂಡಿದ್ದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿತ್ತು.
ಈ ಮೇಲಿನ ಹಿನ್ನಲೆಯಲ್ಲಿ ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿಯವರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣಕ್ಕೆ ಸಂಬಂಧಪಟ್ಟ ಎರಡನೇ ಆರೋಪಿಯಾದ ಕೆ.ಆರ್ ಶೆಟ್ಟಿ ಇಂದು ನ್ಯಾಯಾಲಯಕ್ಕೆ ಹಾಜರಾಗಿದ್ದು ವಿಚಾರಣೆ ನಡೆಸಲಾಗುತ್ತಿದೆ.
ಈ ಕುರಿತು ಮಾತನಾಡಿದ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ʼಆರೋಪಿಯನ್ನು ಪೊಲೀಸ್ ಕಸ್ಟಡಿಗೆ ನೀಡುವಂತೆ ಕೇಳಿದ್ದು, ನ್ಯಾಯಾಲಯದ ಆದೇಶದಕ್ಕಾಗಿ ಕಾಯುತ್ತಿದ್ದೇವೆʼ ಎಂದು ಹೇಳಿದ್ದಾರೆ.