ಸಿಡ್ನಿ : ವಿಶ್ವಕಪ್ T20 ಟೂರ್ನಿಯ ಇಂದಿನ ಭಾರತ ಮತ್ತು ನೆದರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ 56 ರನ್ ಗಳ ಅಂತರದಿಂದ ಸುಲಭವಾಗಿ ಜಯ ಸಾಧಿಸಿತು.
ಟಾಸ್ ಗೆದ್ದು ಬ್ಯಾಟಿಂಗ್ ಅಯ್ಕೆ ಮಾಡಿಕೊಂಡ ಭಾರತ 20 ಓವರ್‌ಗಳಿಗೆ 2 ವಿಕೆಟ್ ನಷ್ಟಕ್ಕೆ 179 ರನ್ ಗಳ ಗುರಿಯನ್ನು ನೆದರ್ಲೆಂಡ್ ಗೆ ನೀಡಿತ್ತು.
ಎರಡನೇ ಇನ್ನಿಂಗ್ಸ್ ಆರಂಭಿಸಿದ ನೆದರ್ಲೆಂಡ್ ತಂಡ ಭಾರತದ ಬೌಲಿಂಗ್ ತಡೆದುಕೊಳ್ಳದೆ ತತ್ತರಿಸುವಂತಾಯಿತು.
ಐದು ಓವರ್ ಮುಗಿಯುವಷ್ಟರಲ್ಲಿ 2 ವಿಕೆಟ್ ಕಳೆದುಕೊಂಡ ನೆದರ್ಲೆಂಡ್ ಸಂಕಷ್ಟಕ್ಕೆ ಸಿಲುಕಿತು. ಅರ್ಷದೀಪ್ ದಿಂಗ್ ಬೌಲಿಂಗ್ ತಡೆದುಕೊಂಡಂತೆ ಇತರೆ ಬೌಲರ್ ಗಳನ್ನ ತಡೆಯುವಲ್ಲಿ ಸಂಪೂರ್ಣ ವಿಫಲಗೊಂಡ ನೆದರ್ಲೆಂಡ್ ತಂಡ 9 ವಿಕೆಟ್ ನಷ್ಟಕ್ಕೆ ಕೇವಲ 123 ರನ್ ಗಳಿಸಲಷ್ಟೇ ಶಕ್ತರಾದರು.
ಇದರೊಂದಿಗೆ ಭಾರತ ವಿಶ್ವ ಕಪ್ T20 ಟೂರ್ನಿಯ ಸೂಪರ್ 12 ಗ್ರೂಪ್ 2 ನಲ್ಲಿ ಎರಡು ಪಂದ್ಯಗಳಿಗೆ ಎರಡೂ ಪಂದ್ಯಗಳನ್ನ ಗೆದ್ದು ಮೊದಲ ಸ್ಥಾನದಲ್ಲಿದೆ.