ಪ್ರವಾದಿ ಮೊಹಮ್ಮದ್‌ ವಿರುದ್ಧ ಅವಹೇಳನಕಾರಿ ಹೇಳಿಕೆ: ಬಿಜೆಪಿ ಶಾಸಕ ಬಂಧನ

ತೆಲಂಗಾಣ: ರಾಜ್ಯ ಬಿಜೆಪಿ ಶಾಸಕ ಟಿ ರಾಜಾ ಸಿಂಗ್‌ ಅವರು ಪ್ರವಾದಿ ಮುಹಮ್ಮದ್‌ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ನಿನ್ನೆ ರಾತ್ರಿ ಹೈದ್ರಾಬಾದ್‌ನಲ್ಲಿ ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ ನಂತರ ಅವರನ್ನು ಬಂಧಿಸಲಾಗಿದೆ.

ʼನಮಗೆ ಹಲವು ದೂರುಗಳು ಬಂದಿವೆ. ಶಾಸಕ ರಾಜಾ ಸಿಂಗ್‌ ಬಂಧಿತರಾಗಿದ್ದಾರೆ. ನಾವು ಶೀಘ್ರದಲ್ಲೆ ಬಂಧನದ ಬಗ್ಗೆ ಮಾಹಿತಿಯನ್ನು ನೀಡುತ್ತೇವೆʼ ಎಂದು ಪಶ್ಚಿಮ ವಲಯ ಡಿಸಿಪಿ ಜೋಯಲ್‌ ಡೇವಿಸ್‌ ತಿಳಿಸಿದರು.

Related Articles

ಇತ್ತೀಚಿನ ಸುದ್ದಿಗಳು