ಪಾವಗಡ: ರಾಜ್ಯದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಬೆಂಗಳೂರು ಸೇರಿದಂತೆ ಹಲವಾರು ಕಡೆ ಜನರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದರೆ, ಕರ್ನಾಟಕ-ಆಂಧ್ರಪ್ರದೇಶ ಗಡಿಭಾಗದ ಪಾವಗಡ ಬಳಿಯ ಗೌಡನಕುಂಟಾ ಗ್ರಾಮದಲ್ಲಿ ಭಾರಿ ಮಳೆಯಾಗಿರುವ ಹಿನ್ನಲೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದರೂ, ಜನರು ಸಂತಸಗೊಂಡಿರುವುದು ಅಚ್ಚರಿ ಮೂಡಿಸಿದೆ.
ಭಾರತದ ಅತ್ಯಂತ ಒಣ ಸ್ಥಳಗಳಲ್ಲಿ ಒಂದಾಗಿರುವ ಗೌಡನಕುಂಟಾ ಗ್ರಾಮದಲ್ಲಿ, 42 ವರ್ಷಗಳಲ್ಲಿ ಮೊದಲ ಬಾರಿಗೆ ಗ್ರಾಮದ ಕೆರೆ ತುಂಬಿದ್ದು, ಕೆರೆಯ ಕೋಡಿ ಹೊಡೆದು ಪ್ರವಾಹ ಪರಿಸ್ಥಿತಿ ಉಂಟಾಗಿದ್ದರು, ಕೆರೆ ತುಂಬಿರುವ ಖುಷಿಗೆ ಇಡೀ ಗ್ರಾಮವು ಕುಣಿದು ಕುಪ್ಪಳಿಸಿ ಸಂಭ್ರಮಾಚರಣೆ ಮಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿದೆ.