ಹೊಸದಿಲ್ಲಿ, ಸೆಪ್ಟೆಂಬರ್ 11: ಮುಂಬೈ ಮೂಲದ ಎನ್‌ಟಿಡಿ ಫಾರ್ಮಾಸ್ಯುಟಿಕಲ್ಸ್ ಇತ್ತೀಚೆಗೆ ಬಿಡುಗಡೆ ಮಾಡಿದ ‘ಪ್ರೆಸ್‌ವು’ ಕಣ್ಣಿನ ಹನಿಗಳಿಗೆ ಡಿಸಿಜಿಐ ನೀಡಿದ್ದ ಅನುಮೋದನೆಯನ್ನು ರದ್ದುಗೊಳಿಸಿದೆ.
DCGI ಆಗಸ್ಟ್‌ನಲ್ಲಿ ಈ ಕಣ್ಣಿನ ಹನಿಗಳನ್ನು ಅನುಮೋದನೆ ನೀಡಿತ್ತು. ಪ್ರಿಸ್ಬಯೋಪಿಯಾದಿಂದ ಬಳಲುತ್ತಿರುವವರು ಈ ಐ ಡ್ರಾಪ್ಸ್ ಬಳಸಿದರೆ ಕನ್ನಡಕದ ಅಗತ್ಯವನ್ನು ಕಡಿಮೆ ಮಾಡಬಹುದು ಎಂದು ಕಂಪನಿ ಹೇಳುತ್ತದೆ. ಓದುವ ಕನ್ನಡಕಗಳ ಅಗತ್ಯವನ್ನು ಕಡಿಮೆ ಮಾಡಲು ಭಾರತದಲ್ಲಿ ತಯಾರಿಸಿದ ಮೊದಲ ಐ ಡ್ರಾಪ್ ಎಂದು ಅದು ಹೇಳಿಕೊಂಡಿತ್ತು.
ಈ ಹೇಳಿಕೆ ಕುರಿತು ವಿವರಣೆ ನೀಡುವಂತೆ ಡಿಸಿಜಿಐ ಕಂಪನಿಗೆ ಸೆಪ್ಟೆಂಬರ್ 4ರಂದು ಸೂಚಿಸಿತ್ತು. ಪ್ರಿಸ್ಬಯೋಪಿಯಾ ಚಿಕಿತ್ಸೆಗಾಗಿ ಭಾರತದಲ್ಲಿ ಇದುವರೆಗೆ ಯಾವುದೇ ಕಣ್ಣಿನ ಹನಿಗಳನ್ನು ಅನುಮೋದಿಸದ ಕಾರಣ ಈ ಘೋಷಣೆ ಮಾಡಲಾಗಿದೆ ಎಂದು ಕಂಪನಿ ವಿವರಿಸಿದೆ.
ಆದರೆ DCGI ಈಗ ತನ್ನ ಅನುಮತಿಯನ್ನು ರದ್ದುಗೊಳಿಸಿದೆ, ಕನ್ನಡಕಗಳ ಅಗತ್ಯವನ್ನು ಕಡಿಮೆ ಮಾಡಲು ಈ ಡ್ರಾಪ್ ಕೆಲಸ ಮಾಡುತ್ತದೆ ಎಂದು ಹೇಳಲು ಅವಕಾಶವಿಲ್ಲ ಎಂದು ಅದು ತಿಳಿಸಿದೆ. ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದಾಗಿ ಕಂಪನಿ ಸಿಇಒ ನಿಖಿಲ್ ಕೆ ಮಸೂರ್ಕರ್ ಹೇಳಿದ್ದಾರೆ.