ಭಾರತ-ಚೀನಾ ಸಂಬಂಧಗಳಲ್ಲಿ ಇತ್ತೀಚೆಗೆ ಉಂಟಾಗಿರುವ ಕುಸಿತವನ್ನು ಗಮನದಲ್ಲಿಟ್ಟುಕೊಂಡು, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗಿನ ದ್ವಿಪಕ್ಷೀಯ ಮಾತುಕತೆ ಮತ್ತು ಇತ್ತೀಚಿನ ದಿನಗಳಲ್ಲಿ ಅಮೇರಿಕಾದೊಂದಿಗಿನ ಕದಡಿದ ಸಂಬಂಧದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಚೀನಾಗೆ ತೆರಳಿದ್ದಾರೆ.
ಟಿಯಾಂಜಿನ್’ನಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯಲ್ಲಿ ಭಾಗವಹಿಸಲು ಎರಡು ದಿನಗಳ ಭೇಟಿಗಾಗಿ ಪ್ರಧಾನಿ ನರೇಂದ್ರ ಮೋದಿ ಚೀನಾಕ್ಕೆ ಆಗಮಿಸಿದ್ದಾರೆ. ಕಳೆದ ಏಳು ವರ್ಷಗಳಲ್ಲಿ ಅವರ ಮೊದಲ ಭೇಟಿಯಾಗಿದೆ. ಆಗಸ್ಟ್ 31 ಮತ್ತು ಸೆಪ್ಟೆಂಬರ್ 1ರಂದು ನಡೆಯಲಿರುವ ವಾರ್ಷಿಕ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ 10 ಸದಸ್ಯರ SCO ಬಣದ ನಾಯಕರೊಂದಿಗೆ ಸೇರಲಿದ್ದಾರೆ.
ವಾಷಿಂಗ್ಟನ್ ಭಾರತೀಯ ರಫ್ತಿನ ಮೇಲೆ ತೀವ್ರ ಸುಂಕಗಳನ್ನು ವಿಧಿಸಿದ ನಂತರ, ಅಮೆರಿಕ ಜೊತೆಗಿನ ಭಾರತದ ಸಂಬಂಧಗಳಲ್ಲಿನ ಇತ್ತೀಚಿನ ಪ್ರಕ್ಷುಬ್ಧತೆಯ ಹಿನ್ನೆಲೆಯಲ್ಲಿ SCO ಶೃಂಗಸಭೆಯನ್ನು ವಿಶೇಷವಾಗಿ ಮಹತ್ವದ್ದಾಗಿ ನೋಡಲಾಗುತ್ತಿದೆ.