Saturday, September 6, 2025

ಸತ್ಯ | ನ್ಯಾಯ |ಧರ್ಮ

ಮಿಲಾದ್-ಉನ್-ನಬಿ ಹಬ್ಬಕ್ಕೆ ಶುಭ ಕೋರಿದ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ : ಸೆಪ್ಟೆಂಬರ್ 5 ರಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ದೇಶದ ಜನತೆಗೆ ಮಿಲಾದ್-ಉನ್-ನಬಿ (Milad-un-Nabi) ಮತ್ತು ಶಿಕ್ಷಕರ ದಿನಾಚರಣೆಯ (Teachers Day) ಶುಭಾಶಯಗಳನ್ನು ಕೋರಿದ್ದಾರೆ.

ಈದ್-ಎ ಮಿಲಾದ್ ಅಥವಾ ಮೌಲಿದ್ ಅಲ್-ನಬಿ ಅಲ್-ಶರೀಫ್ ಎಂದೂ ಕರೆಯಲ್ಪಡುವ ಮಿಲಾದ್-ಉನ್-ನಬಿಯನ್ನು ಇಂದು ಆಚರಿಸಲಾಗುತ್ತಿದೆ. ಇದರೊಂದಿಗೆ ದೇಶದ ಎರಡನೇ ರಾಷ್ಟ್ರಪತಿ ಮತ್ತು ಖ್ಯಾತ ಶಿಕ್ಷಣ ತಜ್ಞ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆಯನ್ನು ಗೌರವಿಸಲು ಪ್ರತಿ ವರ್ಷ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಪ್ರಧಾನಿ ಮೋದಿ ಅವರು ದೇಶದ ಜನತೆಗೆ ಶುಭಕೋರಿದ್ದಾರೆ. ಎಕ್ಸ್‌ ಪೋಸ್ಟ್‌ನಲ್ಲಿ ಹೃತ್ಪೂರ್ವಕ ಶುಭಾಶಯಗಳನ್ನು ವ್ಯಕ್ತಪಡಿಸಿದ ಅವರು, “ಮಿಲಾದ್-ಉನ್-ನಬಿ ಸಂದರ್ಭದಲ್ಲಿ ಶುಭಾಶಯಗಳು. ಈ ಪವಿತ್ರ ದಿನವು ನಮ್ಮ ಸಮಾಜದಲ್ಲಿ ಶಾಂತಿ ಮತ್ತು ಯೋಗಕ್ಷೇಮವನ್ನು ತರಲಿ. ಕರುಣೆ, ಸೇವೆ ಮತ್ತು ನ್ಯಾಯದ ಮೌಲ್ಯಗಳು ಯಾವಾಗಲೂ ನಮಗೆ ಮಾರ್ಗದರ್ಶನ ನೀಡಲಿ. ಈದ್ ಮುಬಾರಕ್!” ಎಂದು ಬರೆದಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page