ನವದೆಹಲಿ : ಸೆಪ್ಟೆಂಬರ್ 5 ರಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ದೇಶದ ಜನತೆಗೆ ಮಿಲಾದ್-ಉನ್-ನಬಿ (Milad-un-Nabi) ಮತ್ತು ಶಿಕ್ಷಕರ ದಿನಾಚರಣೆಯ (Teachers Day) ಶುಭಾಶಯಗಳನ್ನು ಕೋರಿದ್ದಾರೆ.
ಈದ್-ಎ ಮಿಲಾದ್ ಅಥವಾ ಮೌಲಿದ್ ಅಲ್-ನಬಿ ಅಲ್-ಶರೀಫ್ ಎಂದೂ ಕರೆಯಲ್ಪಡುವ ಮಿಲಾದ್-ಉನ್-ನಬಿಯನ್ನು ಇಂದು ಆಚರಿಸಲಾಗುತ್ತಿದೆ. ಇದರೊಂದಿಗೆ ದೇಶದ ಎರಡನೇ ರಾಷ್ಟ್ರಪತಿ ಮತ್ತು ಖ್ಯಾತ ಶಿಕ್ಷಣ ತಜ್ಞ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆಯನ್ನು ಗೌರವಿಸಲು ಪ್ರತಿ ವರ್ಷ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಪ್ರಧಾನಿ ಮೋದಿ ಅವರು ದೇಶದ ಜನತೆಗೆ ಶುಭಕೋರಿದ್ದಾರೆ. ಎಕ್ಸ್ ಪೋಸ್ಟ್‌ನಲ್ಲಿ ಹೃತ್ಪೂರ್ವಕ ಶುಭಾಶಯಗಳನ್ನು ವ್ಯಕ್ತಪಡಿಸಿದ ಅವರು, “ಮಿಲಾದ್-ಉನ್-ನಬಿ ಸಂದರ್ಭದಲ್ಲಿ ಶುಭಾಶಯಗಳು. ಈ ಪವಿತ್ರ ದಿನವು ನಮ್ಮ ಸಮಾಜದಲ್ಲಿ ಶಾಂತಿ ಮತ್ತು ಯೋಗಕ್ಷೇಮವನ್ನು ತರಲಿ. ಕರುಣೆ, ಸೇವೆ ಮತ್ತು ನ್ಯಾಯದ ಮೌಲ್ಯಗಳು ಯಾವಾಗಲೂ ನಮಗೆ ಮಾರ್ಗದರ್ಶನ ನೀಡಲಿ. ಈದ್ ಮುಬಾರಕ್!” ಎಂದು ಬರೆದಿದ್ದಾರೆ.