ಹಾಸನ: ಹಾಸನದಲ್ಲಿ ಪ್ರೀತಮ್ ಗೌಡ ನೇತೃತ್ವದ ಬಿಜೆಪಿ ತಂಡ ನಕಲಿ ಗಿರಾಕಿಗಳು, ಬೆರಕೆ ಬಿಜೆಪಿಗರು ಎಂದು ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಪರಾಜಿತ ಅಭ್ಯರ್ಥಿ ಹಾಗೂ ಬಿಜೆಪಿ ಮುಖಂಡ ವಕೀಲ ದೇವರಾಜೇಗೌಡ ತೀವ್ರ ವಾಗ್ದಾಳಿ ನಡೆಸಿದರು.
ಇಂದು ಸುದ್ದಿಗಾರರೊಂದಿಗೆ ಅವರು ಮಾತನಾಡಿದರು, ಹಾಸನದಲ್ಲಿ ಪ್ರೀತಂ ಗೌಡ ನೇತೃತ್ವದ ಬಿಜೆಪಿ ತಂಡಕ್ಕೆ ಪಕ್ಷದ ಹೆಸರಿಡುವ ನೈತಿಕತೆ ಇಲ್ಲ ಬಿಜೆಪಿ ಪಕ್ಷಕ್ಕೆ ಅವರ ಕೊಡುಗೆ ಏನು, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿರುವ ಪ್ರೀತಂ ಗೌಡ ಪಕ್ಷ ಕಟ್ಟುವ ಕೆಲಸ ಮಾಡುತ್ತಿದ್ದಾರೆ ಸಾಬೀತು ಮಾಡಲಿ ಎಂದು ಸವಾಲು ಹಾಕಿದರು. ಮೂರ್ ನಾಲ್ಕು ಜನ ಹಿಂಬಾಲಕರನ್ನು ಕಟ್ಟಿಕೊಂಡು ಬಾಯಿಗೆ ಬಂದಂತೆ ಅವನ ವಿರುದ್ಧ ಮಾತನಾಡಿದ ಮತ್ತೊಬ್ಬರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿರುವ ಪ್ರೀತಂ ಗೌಡ ಬಿಜೆಪಿಗೆ ಪ್ರಾಮಾಣಿಕನಾಗಿ ಇದ್ದಾನೆಯೇ ಎಂದು ಮನವರಿಕೆ ಮಾಡಿಕೊಳ್ಳಬೇಕು . ಕಳೆದ ಎಂಪಿ ಚುನಾವಣೆಯಲ್ಲಿ ಯಾವ ಪಕ್ಷದ ಗೆಲುವಿಗೆ ಕೆಲಸ ಮಾಡಿದ್ದು ಇಡೀ ಜಿಲ್ಲೆಗೆ ಗೊತ್ತಿದೆ ಎಂದು ತಮ್ಮ ಅಸಮಧಾನ ವ್ಯಕ್ತಪಡಿಸಿದ್ದರು.
ಅವರ ಜೊತೆ ಇರುವ ಹಿಂಬಾಲಕರು ಕೂಡ ಅವರು ಮಾಡಿದ್ದೆ ಸರಿ ಎಂಬಂತೆ ಮಾತನಾಡುತ್ತಿದ್ದಾರೆ ಒಂದೆಡೆ ಕಾಂಗ್ರೆಸ್ ಸಂಸದ ಶ್ರೇಯಸ್ ಕಥೆ ಹಾಗೂ ಇನ್ನೊಂದೆಡೆ ಪ್ರೀತಮ್ ಗೌಡ ಅವರನ್ನು ಹೊತ್ತುಕೊಂಡು ಕುಣಿಯುತ್ತಿರುವ ಬಿಜೆಪಿಗರು ಯಾವ ಪಕ್ಷದವರು ಎಂಬ ಗೊಂದಲದಲ್ಲಿ ಜನರಾಗಿದ್ದಾರೆ ಮೊದಲು ಜನರಿಗೆ ಅವರು ಯಾವ ಪಕ್ಷಕ್ಕೆ ನಿಯತ್ತಾಗಿದ್ದಾರೆ ಎಂಬುದರ ಬಗ್ಗೆ ತಿಳಿಸಲಿ ಎಂದು ಹೇಳಿದರು.
ಗೃಹ ಮಂಡಳಿಯ ಅಧ್ಯಕ್ಷ ಶಿವಲಿಂಗೇಗೌಡ ಅವರ ವಿರುದ್ಧ ಮಾತನಾಡಿ, ಇತ್ತೀಚಿಗೆ ಶಿವಲಿಂಗೇಗೌಡ ನೇತೃತ್ವದ ತಂಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು ನನ್ನ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿದ್ದಾರೆ. ಅವರು ತಮ್ಮ ಮನೆ ಕಟ್ಟಿರುವುದು ಅಕ್ರಮವಾಗಿ ನ್ಯಾಯಾಲಯದಲ್ಲಿ ಪತ್ತೆಯಾಗಿದೆ. ತಮ್ಮ ಹುಡುಕಾಟವನ್ನು ಮುಚ್ಚಿ ಹಾಕಲು ಒಂದಷ್ಟು ಜನರನ್ನು ಕರೆದುಕೊಂಡು ಬಂದು ಸುದ್ದಿ ವ್ಯಕ್ತಿ ನಡೆಸಿದರೆ ಅವರು ಮಾಡಿರುವ ತಪ್ಪನ್ನು ಮುಚ್ಚಿಡಲು ಸಾಧ್ಯವಿಲ್ಲ ಇನ್ನೇನು ಕೆಲವೇ ದಿನಗಳಲ್ಲಿ ಅವರ ಬಂಡವಾಳ ಬಯಲಾಗಲಿದೆ.
