Home ರಾಜಕೀಯ ಬಿಜೆಪಿಗೆ “ಜೈ ಭೀಮ್” ಘೋಷಣೆ ಕೂಗಲು ಪಟ್ಟು ಹಿಡಿದ ಪ್ರಿಯಾಂಕಾ ಗಾಂಧಿ ವಾದ್ರಾ

ಬಿಜೆಪಿಗೆ “ಜೈ ಭೀಮ್” ಘೋಷಣೆ ಕೂಗಲು ಪಟ್ಟು ಹಿಡಿದ ಪ್ರಿಯಾಂಕಾ ಗಾಂಧಿ ವಾದ್ರಾ

0

ಅಂಬೇಡ್ಕ‌ರ್ ಅವರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ತಮ್ಮ ಪಕ್ಷದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಅದರ ಸಂಸದರ ವಿರುದ್ಧ ಕಾಂಗ್ರೆಸ್‌ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಗುರುವಾರ ವಾಗ್ದಾಳಿ ನಡೆಸಿ, ಸಂಸತ್ತಿನ ಆವರಣದಲ್ಲಿ “ಜೈ ಭೀಮ್” ಘೋಷಣೆ ಕೂಗುವಂತೆ ಬಿಜೆಪಿ ನಾಯಕರಿಗೆ ಸವಾಲು ಹಾಕಿದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಳಸುವ ಭಾಷೆ ಅವರ ನೈಜ ನಿಲುವನ್ನು ಪ್ರತಿಬಿಂಬಿಸುವುದರಿಂದ ಬಿಜೆಪಿ ಸಂವಿಧಾನವನ್ನು ರಕ್ಷಿಸುತ್ತಿದೆ ಎಂದು ರಾಷ್ಟ್ರದ ಜನತೆ ಗೊಂದಲಕ್ಕೀಡಾಗಬಾರದು ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದರು.

“ಅಮಿತ್ ಶಾ ಹೇಳಿಕೆ ವಿರುದ್ಧ ನಾವು ಪ್ರತಿನಿತ್ಯ ಬೆಳಗ್ಗೆ 10:00 ರಿಂದ 11:00 ರವರೆಗೆ ಪ್ರತಿಭಟನೆ ನಡೆಸುತ್ತೇವೆ. ಇಲ್ಲಿಯವರೆಗೆ ಬಿಜೆಪಿಯಿಂದ ಯಾವುದೇ ಬೆಳವಣಿಗೆ ಆಗಿಲ್ಲ. ಈ ಬೆಳವಣಿಗೆಯೆಲ್ಲಾ ಪಿತೂರಿಯಾಗಿದೆ. ನಮ್ಮನ್ನು ತಡೆಯುವವರಿಗೆ ನಾವು ‘ಜೈ ಭೀಮ್’ ಘೋಷಣೆ ಮಾಡಲು ನಾವು ಕೇಳಿದ್ದೇವೆ. ನಾವು ಈ ದೇಶದ ಜನರು ಸಂವಿಧಾನವನ್ನು ರಕ್ಷಿಸುತ್ತಿದ್ದಾರೆಂದು ಭಾವಿಸಿದರೆ ನಾವು ನಮ್ಮ ಸಂವಿಧಾನಕ್ಕಾಗಿ ಘೋಷಣೆಗಳನ್ನು ಕೂಗುತ್ತಲೇ ಇದ್ದೇವೆ, ಅಮಿತ್ ಶಾ ಅವರ ಭಾಷೆಯಿಂದ ಸಂವಿಧಾನ ಮತ್ತು ಅಂಬೇಡ್ಕರ್ ಬಗೆಗಿನ ಅವರ ನಿಲುವು ಬಹಿರಂಗವಾಗಿದೆ.. ಹಾಗೇ ದೇಶದ ಜನತೆ ಕೂಡ ಗೊಂದಲಕ್ಕೆ ಈಡಾಗಬಾರದು ಎಂದು ಹೇಳಿದ್ದಾರೆ.

“ದೈಹಿಕ ಹಲ್ಲೆ” ಆರೋಪದ ನಡುವೆ ಅವರು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿಯವರ ರಕ್ಷಣೆಗೆ ಬಂದರು. ತನ್ನ ಸಹೋದರ ಶಾಂತಿಯುತವಾಗಿ ಸಂಸತ್ತಿನ ಒಳಗೆ ಹೋಗುತ್ತಿದ್ದಾಗ ಬಿಜೆಪಿ ಸಂಸದರು ಅವರನ್ನು ತಡೆದರು ಎಂದು ಪ್ರಿಯಾಂಕ ವಾದ್ರಾ ಹೇಳಿದರು.

ತಮ್ಮ ಹೇಳಿಕೆ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾದ ಬಳಿಕ ಸಮರ್ಥನೆ ನೀಡಿರುವ ಅಮಿತ್ ಶಾ, ನನ್ನ ಹೇಳಿಕೆಯನ್ನು ತಿರುಚಲಾಗಿದೆ. ಅಂಬೇಡ್ಕರ್ ಅವರಿಗೆ ನಾನು ಅವಮಾನ ಮಾಡಿಲ್ಲ ಎಂದು ಹೇಳಿದ್ದಾರೆ. ಆದರೆ ವಿಪಕ್ಷಗಳು ಮಾತ್ರ ಹೋರಾಟ ಮುಂದುವರೆಸಿದ್ದು, ಅಮಿತ್ ಶಾ ಕ್ಷಮೆ ಕೇಳಲೇಬೇಕು ಮತ್ತು ರಾಜೀನಾಮೆ ಕೊಡಬೇಕು ಎಂದು ಪಟ್ಟು ಹಿಡಿದಿವೆ.

You cannot copy content of this page

Exit mobile version