Home ಬ್ರೇಕಿಂಗ್ ಸುದ್ದಿ ಕೇಂದ್ರ ಗೃಹ ಸಚಿವರ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

ಕೇಂದ್ರ ಗೃಹ ಸಚಿವರ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

0


ಹಾಸನ: ಅಂಬೇಡ್ಕರ್ ವಿರುದ್ಧವಾಗಿ ಹೇಳಿಕೆ ನೀಡಿ ಆಕ್ರೋಶವ್ಯಕ್ತಪಡಿಸಿರುವ ಕೇಂದ್ರ ಗೃಹ ಸಚಿವರಾದಂತಹ ಅಮಿತ್ ಶಾ ಅವರು ಹೇಳಿಕೆ ವಾಪಸ್ ಪಡೆಯಬೇಕು ಮತ್ತು ಇವರನ್ನ ಸಚಿವ ಸಂಪೂಟದಿAದ ವಜಾಗೊಳಿಸಬೇಕೆಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದ ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿರುವ ಅಂಬೇಡ್ಕರ್ ಪ್ರತಿಮೆ ಎದುರು ಪ್ರತಿಭಟನೆ ನಡೆಸಿ ಆಕ್ರೋಶವ್ಯಕ್ತಪಡಿಸಿದರು.


ಇದೆ ವೇಳೆ ಪರಿಶಿಷ್ಟ ಜಾತಿ ಘಟಕದ ಜಿಲ್ಲಾಧ್ಯಕ್ಷ ದೇವಪ್ಪ ಮಲ್ಲಿಗೆವಾಳ್ ಮಾಧ್ಯಮದೊಂದಿಗೆ ಮಾತನಾಡಿ, ಕೇಂದ್ರ ಗೃಹ ಸಚಿವರಾದಂತಹ ಅಮಿತ್ ಶಾ ಅವರು ಲೋಕಾಸಭೆಯಲ್ಲಿ ಅಂಬೇಡ್ಕರ್ ರವರ ವಿರುದ್ಧವಾಗಿ ಹೇಳಿಕೆ ನೀಡಿ ಆಕ್ರೋಶವ್ಯಕ್ತಪಡಿಸಿದ್ದಾರೆ. ಅವರ ಅಂತರAಗದಲ್ಲಿ ಇರುವುದನ್ನು ಬಹಿರಂಗವಾಗಿ ಹೇಳುವ ಮೂಲಕ ನಾವು ಕೋಮುವಾದಿಗಳು, ಮನುವಾದಿಗಳು ಎಂಬುದನ್ನು ಲೋಕಾಸಭೆಯಲ್ಲಿ ಪ್ರಸ್ತೂತ ಪಡಿಸಿದ್ದಾರೆ ಎಂದು ಆಕ್ರೋಶವ್ಯಕ್ತಪಡಿಸಿದರು. ಮೂರು ಪರ್ಸೇಂಟ್ ಇರುವಂತಹ ಅಲ್ಪಸಂಖ್ಯಾತರು ೯೭ ಪರ್ಸೇಂಟ್ ಇರುವ ಬಹುಸಂಖ್ಯಾತರು ಏನಿದ್ದಾರೆ ಮುಂದಿನ ದಿನಗಳಲ್ಲಿ ಈತರವಾದ ಹೇಳಿಕೆಗಳನ್ನು ಅಮಿತ್ ಶಾ ಆಗಲಿ, ಅವರ ಕೇಂದ್ರದ ಸಂಪೂಟದ ಸಚಿವರಾಗಲಿ ಇಂತಹ ಹೇಳಿಕೆ ಕೊಟ್ಟರೇ ಮುಂದೆ ರಕ್ತಪಾತವಾಗುತ್ತದೆ ಎಂದು ಎಚ್ಚರಿಸಿದರು. ಬಹುಸಂಖ್ಯಾತ ಏನಿದ್ದೀವಿ ನಾವುಗಳೆಲ್ಲಾ ಒಟ್ಟಾಗಿ ಕೋಮುವಾದಿ ಸರಕಾರವನ್ನು, ಮನುವಾದಿ ಸರಕಾರವನ್ನು ತೊಲಗಿಸುವುದಕ್ಕೆ ಕಟಿಬದ್ಧರಾಗಿ ನಿಲ್ಲುತ್ತೇವೆ ಎಂದರು. ಕೂಡಲೇ ಗೃಹ ಸಚಿವ ಅಮಿತ್ ಶಾ ಇಂತಹ ಹೇಳಿಕೆಯನ್ನು ವಾಪಸ್ ಪಡೆಯಬೇಕು. ಪ್ರಧಾನಿ ಮೋದಿಯವರು ಮತ್ತು ರಾಷ್ಟçಪತಿಗಳು ಅಮಿತ್ ಶಾ ಅವರನ್ನ ಸಂಪೂಟದಿAದ ವಜಾಗೊಳಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ರಾಮಚಂದ್ರ, ಮಂಜುನಾಥ್ ಶರ್ಮ, ಅಶೋಕ್, ಶೇಖರಪ್ಪ, ಕುಮಾರ್, ಅಶ್ರು ಇತರರು ಉಪಸ್ಥಿತರಿದ್ದರು.

You cannot copy content of this page

Exit mobile version