Home ಸಿನಿಮಾ ಬೆಂಗಳೂರಿನಲ್ಲಿ ಸಿದ್ದಾರ್ಥ್ ನಟನೆಯ 3BHK ಸಿನಿಮಾ ಪ್ರಚಾರ..ಡಾಲಿ ಧನಂಜಯ್ ಸಾಥ್

ಬೆಂಗಳೂರಿನಲ್ಲಿ ಸಿದ್ದಾರ್ಥ್ ನಟನೆಯ 3BHK ಸಿನಿಮಾ ಪ್ರಚಾರ..ಡಾಲಿ ಧನಂಜಯ್ ಸಾಥ್

0

ತಮಿಳು ಚಿತ್ರರಂಗದ ಪ್ರತಿಭಾನ್ವಿತ ನಟ ಸಿದ್ದಾರ್ಥ್ ನಟನೆಯ 3bhk ಸಿನಿಮಾ ಈಗಾಗಲೇ ಟ್ರೇಲರ್ ಮೂಲಕ ಕುತೂಹಲ ಹೆಚ್ಚಿಸಿದೆ. ಜುಲೈ 4ರಂದು ತೆರೆಗೆ ಬರ್ತಿರುವ ಈ ಚಿತ್ರದ ಪ್ರಚಾರ ಕಾರ್ಯ ಭರದಿಂದ ಸಾಗಿದೆ. ನಿನ್ನೆ ಚಿತ್ರತಂಡ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಪ್ರೀ ರಿಲೀಸ್ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಕಾರ್ಯಕ್ರಮಕ್ಕೆ ನಟ ಡಾಲಿ ಧನಂಜಯ ಹಾಗೂ ನಿರ್ದೇಶಕ ಹೇಮಂತ್ ರಾವ್ ವಿಶೇಷ ಅತಿಥಿಯಾಗಿ ಭಾಗಿಯಾಗಿ ಚಿತ್ರತಂಡಕ್ಕೆ ಸಾಥ್ ಕೊಟ್ಟರು.

ಇದೇ ವೇಳೆ ನಟ ಸಿದ್ದಾರ್ಥ್ ಮಾತನಾಡಿ,‌ 3bhk ಸಿನಿಮಾ ತೆಲುಗು ಹಾಗೂ ಕನ್ನಡದಲ್ಲಿ ರಿಲೀಸ್ ಆಗುತ್ತಿದೆ. ಇದು‌ ನಿಮ್ಮದೇ ಕಥೆ. ನಿಮ್ಮ ಮನೆಯಲ್ಲಿ ನಡೆದಿರುವ ಕಥೆ. ಮತ್ತೆ ಮತ್ತೆ ಪ್ರಯತ್ನ ಮಾಡುವುದೇ ಜೀವನ. ಈ ಸಿನಿಮಾ ನೋಡಿದ ಮೇಲೆ ನಿಮ್ಮ ತಂದೆಯನ್ನು ಬಿಗಿದಪ್ಪಿಕೊಳ್ಳುತ್ತೀರ ಎಂದು ಹೇಳಿದರು.

ನಟಿ ಚೈತ್ರಾ ಆಚಾರ್ ಮಾತನಾಡಿ, ಇದು ನನ್ನ ಮೊದಲ ತಮಿಳು ಸಿನಿಮಾ. ಈ ಚಿತ್ರ ನೋಡಲು ಎಕ್ಸೈಟ್ ಆಗಿದ್ದೇನೆ. ಚಿಕ್ಕ‌ಮಕ್ಕಳಿಂದ ಎಲ್ಲರೂ ನೋಡಬಹುದು ಸಿನಿಮಾ. ಹ್ಯಾಪಿ ಮೂಮೆಂಟ್ ಕೊಡುವ ಸಿನಿಮಾ. ಸ್ಫೂರ್ತಿ ಚಿತ್ರ ಇದಾಗಿದೆ. ಜುಲೈ 4ರಂದು 3bhk ತೆರೆಗೆ ಬರ್ತಿದೆ ಎಂದು ಹೇಳಿದರು.

ನಟ ಡಾಲಿ ಧನಂಜಯ್ ಮಾತನಾಡಿ, 3bhk ಟ್ರೇಲರ್ ನೋಡಿದಾಗ ಬಹಳ ಇಷ್ಟವಾಯ್ತು. ಫಸ್ಟ್ ಶಾಟ್ ನಮ್ಮನ್ನು ಬಾಲ್ಯದಜೀವನಕ್ಕೆ ಕರೆದುಕೊಂಡು ಹೋಯ್ತು. ಪ್ರತಿಯೊಬ್ಬರಿಗೂ ಮನೆ ತೆಗೆದುಕೊಳ್ಳಬೇಕು ಎಂಬ ಕನಸು ಇರುತ್ತದೆ. ಬದುಕಿಗೆ ಹತ್ತಿರುವ ಸಿನಿಮಾ ಇದು. ಸಿನಿಮಾ ಸೂಪರ್ ಹಿಟ್ ಆಗುತ್ತದೆ ಎಂಬ ನಂಬಿಕೆ ಇದೆ. ಸಹೋದರ ಸಿದ್ದಾರ್ಥ್ ನನಗೆ ಇಷ್ಟ. ಈ ಮನುಷ್ಯನಿಗೆ ವಯಸ್ಸೇ ಆಗಲ್ವಾ ಅನಿಸುತ್ತದೆ. ಹೀಗೆ ಅವರು ಮೇನ್ ಟೈನ್ ಮಾಡಿದ್ದಾರೆ. ತುಂಬಾ ಹೃದಯಕ್ಕೆ ಹತ್ತಿರ ಮನುಷ್ಯ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿದರು.

3bhk ಸಿನಿಮಾದಲ್ಲಿ ನಟ ಸಿದ್ದಾರ್ಥ್ ಜೊತೆ ಶರತ್ ಕುಮಾರ್, ದೇವಯಾನಿ, ಯೋಗಿಬಾಬು, ಮೀತಾ ರಘುನಾಥ್ ಹಾಗೂ ಕನ್ನಡ ನಟಿ ಚೈತ್ರಾ ಆಚಾರ್ ಅಭಿನಯಿಸಿದ್ದಾರೆ. ಶ್ರೀ ಗಣೇಶ್ ಅವರು ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಅಮೃತ್ ರಾಮನಾಥ್ ಸಂಗೀತ ನಿರ್ದೇಶನ, ಗಣೇಶ್ ಶಿವ ಸಂಕಲನ, ವಿನೋತ್ ರಾಜ್ ಕುಮಾರ್ ಎನ್ ಕಲಾ ನಿರ್ದೇಶನ ಚಿತ್ರಕ್ಕಿದೆ. ಅರುಣ್ ವಿಶ್ವ ನಿರ್ಮಾಣದ 3bhk ಸಿನಿಮಾ ಜುಲೈ 4ರಂದು ರಿಲೀಸ್ ಆಗಲಿದೆ.

You cannot copy content of this page

Exit mobile version