ಬೇಲೂರು : ಕಳೆದ ಒಂದು ವಾರದಿಂದ ತಾಲೂಕಿನಾದ್ಯಂತ ಬಾರಿ ಮಳೆಯಾಗುತ್ತಿದ್ದು ಅದರಂತೆ ಬೇಲೂರು ಬಸ್ ನಿಲ್ದಾಣದ ಶೌಚಾಲಯದಲ್ಲಿ ನೀರಿಲ್ಲದೆ ಸ್ವಚ್ಚತೆ ಇಲ್ಲದೆ ಗಬ್ಬುನಾರುತ್ತಿದೆ. ಇದರ ಜೊತೆಯಲ್ಲಿ ಶೌಚಾಲಯದ ನೀರು ಹಾಗು ಹೊಟೇಲ್ ತ್ಯಾಜ್ಯದ ನೀರು ಬಸ್ ನಿಲ್ದಾಣದ ಹೊರಗೆ ಹರಿದು ಬಂದು ಆಟೋ ನಿಲ್ದಾಣಕ್ಕೆ ಶೇಕರಣೆಯಾಗು ತ್ತಿದೆ.ಇದರಿಂದ ವಿಪರೀತ ಗಬ್ಬು ನಾರುತ್ತಿದ್ದು ಇದರ ಬಗ್ಗೆ ಕೆ ಎಸ್ ಆರ್ ಟಿ ಸಿ ಅಧಿಕಾರಿಗಳಿಗೆ ಎಷ್ಟು ಮನವಿ ಮಾಡಿದರು ಇದರ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಆಕ್ರೋಶಗೊಂಡ ಸಾರ್ವಜನಿಕರು ಹಾಗು ಆಟೋ ಚಾಲಕರು ನಿಲ್ದಾಣದ ಮೇಲ್ವೀಚಾರಕರನ್ನು ಕರೆದು ಶೌಚಾಲಯಕ್ಕೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಆಟೋ ಚಾಲಕರಾದ ಚಂದ್ರು ಹಾಗೂ ಕೇಶವ ಮಾತನಾಡಿ ಕಳೆದ ಒಂದು ವಾರದಿಂದ ಬಸ್ ನಿಲ್ದಾಣದ ಶೌಚಾಲಯದ ನೀರು ಹೊರ ಭಾಗದಲ್ಲಿ ಹರಿದು ಬರುತ್ತಿದ್ದು ಆಟೋ ಚಾಲಕರಿಗೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.ಇದರ ಜೊತೆಯಲ್ಲಿ ಹೊಟೇಲ್ ತ್ಯಾಜ್ಯ ನೀರು ಇಲ್ಲಿಗೆ ಬಂದು ಗುಂಡಿಯಲ್ಲಿ ಶೇಕರಣೆಯಾಗಿ ಗಬ್ಬು ನಾರುತ್ತಿದ್ದು ಎರಡು ದಿನಗಳ ಹಿಂದಷ್ಟೆ ಪುರಸಭೆ ಅದ್ಯಕ್ಷರು ಕೆ ಎಸ್ ಆರ್ ಟಿ ಸಿ ಅಧಿಕಾರಿಗಳಿಗೆ ತಿವ್ರ ತರಾಟೆಗೆ ತೆಗೆದುಕೊಂಡು ಪುರಸಭೆ ವತಿಯಿಂದ ಗುಂಡಿ ಮುಚ್ಚಿಸಿದ್ದರು.ಆದರೆ ಇಲ್ಲಿಯ ಅಧಿಕಾರಿಗಳು ಜಡ್ಡು ಹಿಡಿದು ಕೂತಿದ್ದು ಶೌಚಾಲಯದ ನೀರು ಸಾರ್ವಜನಿಕರು ತಿರುಗಾಡುವ ಪುಟ್ ಪಾತ್ ಮೇಲೆ ಹರಿಯುತ್ತಿದೆ ಇದರಿಂದ ಬರುವ ಪ್ರವಾಸಿಗರಿಗೆ ಜನರಿಗೆ ಹಾಗು ಆಟೋ ಚಾಲಕರಿಗೆ ತುಂಬಾ ತೊಂದರೆಯಾಗುತ್ತಿದ್ದು ಕೂಡಲೆ ಇದನ್ನು ಸರಿಪಡಿಸಬೇಕು.ಈ ಹಿಂದೆ ಶಾಸಕರು ಸಹ ಇವರಿಗೆ ತರಾಟಗೆ ತೆಗೆದುಕೊಂಡು ಕೆಲಸ ಮಾಡಲು ಸೂಚಿಸಿದ್ದಾದರೂ ಕೆಲಸ ಮಾಡದೆ ಶೌಚಾಲಯದ ನೀರನ್ನು ಹೊರಗೆ ಬಿಟ್ಟಿದ್ದು ಅದನ್ನು ದುರಸ್ಥಿಗೊಳಿಸುವ ವರೆಗೂ ಶೌಚಾಲಯದ ಬಾಗಿಲು ತೆಗೆಯಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಈ ಹಿಂದೆ ಸಾರ್ವಜನಿಕರ ದೂರಿನ ಹಿನ್ನಲೆ ನಾನೆ ಸ್ಥಳಕ್ಕೆ ಬಂದು ಪರಿಸ್ಥಿತಿ ಬಗ್ಗೆ ಡಿಪೊ ವ್ಯವಸ್ಥಾಪಕರು ಹಾಗು ಡಿಸಿಯವರಿಗೆ ಇದರ ಬಗ್ಗೆ ಮಾಹಿತಿ ನೀಡಿ ಸರಿಪಡಿಸುವಂತೆ ತಿಳಿಸಿದ್ದೆ ಇಂದೇ ಇದರ ಬಗ್ಗೆ ಮತ್ತೆ ಎಚ್ಚರಿಕೆ ನೀಡುತ್ತಿದ್ದು ಕೂಡಲೆ ಶೌಚಾಲಯವನ್ಬು ದುರಸ್ಥಿಗೊಳಿಸಲು ತಿಳಿಸುತ್ತಿದ್ದು ನಾನು ಸ್ಥಳಕ್ಕೆ ಬರುವಷ್ಟರಲ್ಲಿ ಅಲ್ಲಿಯ ಸಮಸ್ಯೆ ಬಗೆಹರಿದಿರಬೇಕೆಂದು ಶಾಸಕ ಹೆಚ್ ಕೆ ಸುರೇಶ್ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಆಟೋ ಚಾಲಕರಾದ ಅಣ್ಣಪ್ಪ,ಪರಮೇಶ್ ದೇವರಾಜ್,ವಿನಯ್,ಜಯಣ್ಣ,ರವಿ,ರಂಜಿತ್,ಯೊಗೇಶ್ ,ಹಾಗು ಸಾರ್ವಜನಿಕರು ಹಾಜರಿದ್ದರು.