ಅಕ್ರಮ ಕಾರ್ಖಾನೆ ಮೇಲೆ ಎಫ್‌ಡಿಎ ದಾಳಿ: 900 ಕೆಜಿ ಕಲಬೆರಕೆ ಪನೀರ್ ವಶ

ಪುಣೆ: ಪುಣೆಯ ಮಂಜರಿ ಖುರ್ದ್‌ನಲ್ಲಿರುವ ಅಕ್ರಮ ಕಾರ್ಖಾನೆಯೊಂದರ ಮೇಲೆ ಪುಣೆ ಎಫ್‌ಡಿಎ (ಆಹಾರ ಮತ್ತು ಔಷಧ ಆಡಳಿತ) ದಾಳಿ ನಡೆಸಿ 1.98 ಲಕ್ಷ ರೂಪಾಯಿ ಮೌಲ್ಯದ ಸುಮಾರು 900 ಕೆಜಿ ಕಲಬೆರಕೆ ಪನೀರ್ ಅನ್ನು ವಶಪಡಿಸಿಕೊಂಡಿದೆ ಎಂದು ಸುದ್ದಿ-ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಈ ಕುರಿತು ಮಾಹಿತಿ ನೀಡಿರುವ ಪುಣೆಯ ಸಹಾಯಕ ಆಯುಕ್ತ ಸಂಜಯ್ ನರಗುಡೆ, ಎಫ್‌ಡಿಎ ತಂಡವು ಅಕ್ರಮ ಕಾರ್ಖಾನೆಯೊಂದರ ಮೇಲೆ ದಾಳಿ ನಡೆಸಿದ್ದು, 1.98 ಲಕ್ಷ ರೂಪಾಯಿ ಮೌಲ್ಯದ ಸುಮಾರು 900 ಕೆಜಿ ಕಲಬೆರಕೆ ಪನೀರ್ ಹಾಗೂ 2.24 ಲಕ್ಷ ಮೌಲ್ಯದ ಕೆನೆ ತೆಗೆದ ಹಾಲಿನ ಪುಡಿ ಮತ್ತು ಆರ್‌ಬಿಡಿ ಪ್ಯಾಮೊಲಿನ್ ಎಣ್ಣೆಯನ್ನು ವಶಪಡಿಸಿಕೊಂಡಿದೆ ಎಂದು ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು