ʼಪುಣ್ಯಕೋಟಿ ದತ್ತು ಯೋಜನೆʼಗೆ ರಾಯಭಾರಿಯಾಗಿ ಕಿಚ್ಚ ಸುದೀಪ್‌

ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅವರನ್ನು ರಾಜ್ಯ ಸರ್ಕಾರವು ʼಪುಣ್ಯಕೋಟಿ ದತ್ತು ಯೋಜನೆʼಗೆ ರಾಯಭಾರಿಯಾಗಿ ನೇಮಸಿದೆ.

ಈ ಕುರಿತು ಪಶುಸಂಗೊಪನೆ ಸಚಿವ ಪ್ರಭು ಬಿ ಚವಾಣ್‌ ʼಗೋವುಗಳ ಸಂರಕ್ಷಣೆಯಲ್ಲಿ ಜನರ ಪಾಲುದಾರಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಜಾರಿಮಾಡಲಾದ ಪುಣ್ಯಕೋಟಿ ದತ್ತು ಯೋಜನೆಯನ್ನು ಪ್ರಚಾರ ಮಾಡಲು ಮತ್ತು ಉತ್ತೇಜಿಸಲು ನಟ, ನಿರ್ದೇಶಕ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅವರನ್ನು ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದೆʼ ಎಂದು ಅವರ ಹುಟ್ಟಿದ ದಿನ ಟ್ವೀಟ್‌ ಮಾಡಿ ಘೋಷಿಸಿದ್ದಾರೆ.

ಇದು ಹಸುಗಳನ್ನು ದತ್ತು ಸ್ವೀಕರಿಸುವ ಯೋಜನೆಯಾಗಿದೆ. ಇದರ ಪ್ರಚಾರಕ್ಕಾಗಿ ಸುದೀಪ್‌ ಅವರು ಯಾವುದೇ ಹಣವನ್ನು ಪಡೆಯುತ್ತಿಲ್ಲ ಎಂದು ಸಚಿವ ಪ್ರಭು ಚವಾಣ್‌ ತಿಳಿಸಿದರು.

Related Articles

ಇತ್ತೀಚಿನ ಸುದ್ದಿಗಳು