Wednesday, December 4, 2024

ಸತ್ಯ | ನ್ಯಾಯ |ಧರ್ಮ

ಮಿತಿ ಮೀರಿದ ಪುಷ್ಪ-2 ಸಿನಿಮಾ ಟಿಕೆಟ್‌ ದರ

ಬೆಂಗಳೂರು,ನ.4: ತೆಲುಗಿನ ಖ್ಯಾತ ನಟ ಅಲ್ಲು ಅರ್ಜುನ್‌ ಅವರ ಬಹು ನಿರೀಕ್ಷಿತ ಪಷ್ಪ-2 ಸಿನಿಮಾ ಇದೀಗ ತೆರೆಗೆ ಸಿದ್ದವಾಗಿದೆ.

ಇದೇ ಡಿಸೆಂಬರ್ 5 ಗುರುವಾರ ಪ್ರಪಂಚದಾದ್ಯಂತದ ತೆರೆಯ ಮೇಲೆ ಅಲ್ಲು ಅರ್ಜುನ್‌ ಆರ್ಬಟಿಸಲಿದ್ದಾರೆ. ಪುಷ್ಟ ಸಿನಿಮಾದ ಮೊದಲನೇ ಭಾಗ ಅತ್ಯಂತ ಹೆಚ್ಚಿನ ಪ್ರಶಂಸೆಗೆ ಪಾತ್ರವಾಗಿದ್ದಲ್ಲದೆ ಈ ಸಿನಿಮಾದ ನಟನೆಗಾಗಿ ಅಲ್ಲು ಅರ್ಜುನ್‌ ಅವರಿಗೆ ರಾಷ್ಟ್ರ ಪ್ರಶಸ್ತಿ ದೊರಕಿತ್ತು. ನಿರ್ದೇಶಕ ಸುಕುಮಾರ್‌ ಅವರಿಗೂ ಈ ಚಿತ್ರ ಒಳ್ಳೆಯ ಹೆಸರನ್ನು ತಂಡುಕೊಟ್ಟಿತ್ತು.

ತೆಲುಗುವಿನಲ್ಲಿ ಅಷ್ಟೇ ಅಲ್ಲದೇ ಇತರ ಭಾಷೆಗಳಲ್ಲಿಯೂ ಸುದ್ದು ಮಾಡಿದ್ದ ಪುಷ್ಪ ಸಿನಿಮಾದ ಎರಡನೇ ಭಾಗದ ಬಗ್ಗೆ ಸಿನಿಮಾಸಕ್ತರಿಗೆ ಎರಡನೇ ಭಾಗದ ಬಗ್ಗೆ ನಿರೀಕ್ಷೆ ಹೆಚ್ಚಾಗಿಯೇ ಇದೆ. ಟ್ರೈಲರ್‌ ಸಾ ಅದ್ಭುತವಾಗಿ ಮೂಡಿಬಂದಿದ್ದು ನಿರೀಕ್ಷೆ ಎಂಬುದು ಎರಡು ಮೂರು ಪಟ್ಟು ಹೆಚ್ಚಾಗಿದೆ ಎನ್ನಬಹುದು.

ಆದರೆ ಸಿನಿಮಾ ಬಿಡುಗಡೆಗೂ ಮುನ್ನ ಸಿನಿಮಾ ಪ್ರಿಯರಿಗೆ ಪುಷ್ಪ-2 ತಂಡದಿಂದ ಭಾರಿ ಆಘಾತವಾಗಿದೆ. ಸಿನಿಮಾ ಟಿಕೆಟ್‌ ದರ ಎರಡು ಮೂರು ಸಾವಿರಕ್ಕೂ ಹೆಚ್ಚಾಗಿರುವುದು ಸಿನಿ ಪ್ರಿಯರ ಆಕ್ರೋಷಕ್ಕೆ ಕಾರಣವಾಗಿದೆ. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯವರು 200 ರೂಪಾಯಿಗಳಿಂತಲೂ ಹೆಚ್ಚಾಗಿ ಇರಬಾರದು ಎಂಬ ಶರತ್ತು ವಿಧಿಸಿದ್ದರೂ ಸಹ ಸಿನಿಮಾ ಮಂದಿರದವರು ಟಿಕೆಟ್‌ ದರದ ಬಗ್ಗೆ ಏನೂ ಮಾತನಾಡದೆ ತಮಗೆ ಇಷ್ಟ ಬಂದಂತೆ ದರ ಹೆಚ್ಚಿಸಿದ್ದಾರೆ.

ಕನ್ನಡಪರ ಸಂಘಟನೆಗಳು ಪರಭಾಷೆಯ ಚಿತ್ರಗಳಿಂದ ಕನ್ನಡದ ಸಿನಿಮಾಗಳಿಗ ಎತೊಂದರೆ ಆಗುತ್ತಿರುವುದರ ಬಗ್ಗೆ ಆಗಾಗ್ಗೆ ವಿರೋಧ ವ್ಯಕ್ತಪಡಿಸುತ್ತಿದ್ದರೂ ಕನ್ನಡ ಚಲಚಿತ್ರ ವಾಣಿಜ್ಯ ಮಂಡಳಿಯರು ಈ ಬಗ್ಗೆ ಸಿರಿಯಾದ ಕ್ರಮ ವಹಿಸದ ಕಾರಣ ಈ ರೀತಿ ಅಸಂಬದ್ಧವಾಗಿ ಟಿಕೆಟ್‌ ದರ ಹೆಚ್ಚು ಕಡಿಮೆ ಆಗುತ್ತಿರುವುದು ಜನರ ಗಮನಕ್ಕೆ ಬರುತ್ತಿದೆ.

ಬಹುತೇಕ ಎಲ್ಲಾ ಚಿತ್ರಮಂದಿರಗಳಲ್ಲಿ ಪುಷ್ಟ2 ಸಿನಿಮಾದ ಟಿಕೆಟ್‌ ಬುಕ್ಕಿಂಗ್‌ ಈಗಾಗಲೇ ಮುಗಿದಿದ್ದು ಬಹುತೇಕ ಸಿನಿಪ್ರಿಯರಿಗೆ ಇದು ನಿರಾಶೆಯನ್ನು ಮೂಡಿಸುವುದರ ಜೊತೆಗೆ ಆಕ್ರೋಷವನ್ನೂ ಹುಟ್ಟುಹಾಕಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page