Home ರಾಜ್ಯ ದಕ್ಷಿಣ ಕನ್ನಡ ಪುತ್ತೂರಿನಲ್ಲಿ ಮತ್ತೆ ಮುಖಭಂಗಕ್ಕೆ ಈಡಾದ ಬಿಜೆಪಿ

ಪುತ್ತೂರಿನಲ್ಲಿ ಮತ್ತೆ ಮುಖಭಂಗಕ್ಕೆ ಈಡಾದ ಬಿಜೆಪಿ

0

ಪುತ್ತೂರು: ಕಳೆದ ಸಲ ವಿಧಾನಸಭಾ ಚುನಾವಣೆಯಲ್ಲಿ ಬಂಡಾಯ ಅ‍ಭ್ಯರ್ಥಿಯೆದುರು ಮುಖಭಂಗ ಎದುರಿಸಿದ್ದ ಬಿಜೆಪಿ ಈಗ ಮತ್ತು ಪಂಚಾಯತ್‌ ಚುನಾವಣೆಯಲ್ಲಿ ಮೂರನೇ ಸ್ಥಾನಕ್ಕೆ ಕುಸಿಯುವ ಮೂಲಕ ಮತ್ತೆ ಮುಖಭಂಗ ಎದುರಿಸಿದೆ.

ಆರ್ಯಾಪು ಹಾಗೂ ನಿಡ್ಪಳ್ಳಿ ಗ್ರಾ.ಪಂಚಾಯತ್‌ ವ್ಯಾಪ್ತಿಯಲ್ಲಿ ತಲಾ ಒಂದು ಸ್ಥಾನಕ್ಕೆ ನಡೆದ ಚುನಾವಣೆಯ ಫಲಿತಾಂಶ ಬುಧವಾರ ಪ್ರಕಟವಾಗಿದ್ದು ಆರ್ಯಾಪುನಲ್ಲಿ‌ ಪುತ್ತಿಲ ಪರಿವಾರ‌ ಹಾಗೂ ನಿಡ್ಪಳ್ಳಿಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

ನಿಡ್ಪಳ್ಳಿ ಗ್ರಾ.ಪಂನ ನಿಡ್ಪಳ್ಳಿ ವಾರ್ಡ್ 2ರ ಸಾಮಾನ್ಯ ಮೀಸಲಾತಿಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಎನ್. ಸತೀಶ್ ಶೆಟ್ಟಿ (235) ಅವರು ಪುತ್ತಿಲ ಪರಿವಾರದ ಅಭ್ಯರ್ಥಿ ‌ಜಗನ್ನಾಥ ರೈ (208)ವಿರುದ್ಧ ಗೆಲುವು ಸಾಧಿಸಿದರೆ, ಇಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಚಂದ್ರಶೇಖರ ಪ್ರಭು(85) ಮೂರನೇ ಸ್ಥಾನ ಪಡೆದಿದ್ದಾರೆ.

ಆರ್ಯಾಪು ಗ್ರಾ.ಪಂನ ಆರ್ಯಾಪು ವಾರ್ಡ್-2ರ ಹಿಂದುಳಿದ ವರ್ಗ ಎ ಮೀಸಲಾತಿಯಲ್ಲಿ  ಪುತ್ತಿಲ ಪರಿವಾರ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುಬ್ರಹ್ಮಣ್ಯ ಬಲ್ಯಾಯ ದೊಡ್ಡಡ್ಕ(499) ಅವರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪುರುಷೋತ್ತಮ ಪ್ರಭು(353) ವಿರುದ್ಧ ಗೆಲುವು ದಾಖಲಿಸಿದರು. ಬಿಜೆಪಿ ಬೆಂಬಲಿತ ಅಭ್ಯರ್ಥಿ ಜಗದೀಶ್ ಭಂಡಾರಿ(140) ಮೂರನೇ ಸ್ಥಾನ ಪಡೆದರು.

ಕಳೆದ ಬಾರಿ ಇವೆರಡೂ ಕ್ಷೇತ್ರದಲ್ಲಿ ಗೆದ್ದಿದ್ದ ಬಿಜೆಪಿ ಈ ಬಾರಿ ಸೋಲುವುದರೊಂದಿಗೆ ತನ್ನ ಖಾತೆಯಿಂದ ಎರಡು ಸೀಟುಗಳನ್ನು ಕಳೆದುಕೊಂಡು ಪೆಚ್ಚಾಗಿದೆ.

You cannot copy content of this page

Exit mobile version