Saturday, April 19, 2025

ಸತ್ಯ | ನ್ಯಾಯ |ಧರ್ಮ

ಪ್ಯಾರಾಪವರ್ ಲಿಫ್ಟಿಂಗ್‌ನಲ್ಲಿ ಸುಧೀರ್‌ಗೆ ಚಿನ್ನ

ಬರ್ಮಿಂಗ್ ಹ್ಯಾಮ್: ಪ್ಯಾರಾ ಪವರ್‌ಲಿಫ್ಟಿಂಗ್‌ನ ಪರುಷರ ವಿಭಾಗದ ಹೆವಿವೇಯ್ಟ್ ಫೈನಲ್‌ನಲ್ಲಿ ಸುಧೀರ್ ಚಿನ್ನದ ಪದಕವನ್ನು ಗೆಲ್ಲುವುದರೊಂದಿಗೆ, ಭಾರತವು 7 ನೇ ದಿನದ ಪದಕ ಬೇಟೆ ಮುಂದುವರಿಸಿದೆ.

27 ವರ್ಷದ ಸುಧೀರ್ ಪೋಲಿಯೊ ಕಾರಣದಿಂದ ಅಂಗವೈಕಲ್ಯ ಹೊಂದಿದ್ದು ಏಷಿಯನ್ ಪ್ಯಾರ ಗೇಮ್ಸ್ನಲ್ಲಿ ಕಂಚಿನ ಪದಕ ಗೆದ್ದು ತಮ್ಮ ಖಾತೆ ತೆÀರೆದಿದ್ದರು. ಕಾಮನ್‌ವೆಲ್ತ್ ಗೇಮ್ಸ್ನ ಹೆವಿವೇಯ್ಟ್ ಪ್ಯಾರ ಪವರ್‌ಲಿಫ್ಟಿಂಗ್‌ನ ಮೊದಲ ಪ್ರಯತ್ನದಲ್ಲಿ 208 ಕೆ.ಜಿ. ಯನ್ನು ಎತ್ತಿದರು. ಎರಡನೇ ಪ್ರಯತ್ನದಲ್ಲಿ ೨೧೨ ಕೆ.ಜಿ.ಗೆ ಹೆಚ್ಚಿಸಿಕೊಂಡರು. ಈ ಮೂಲಕ 134.5 ಅಂಕಗಳನ್ನು ಗಳಿಸಿ ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ.

ಕಾಮನ್‌ವೆಲ್ತ್ ಗೇಮ್ಸ್ನ 7 ನೇ ದಿನದಲ್ಲಿ ಭಾರತ ಚಿನ್ನ ಮತ್ತು ಬೆಳ್ಳಿಯ ಎರಡು ಪದಕಗಳನ್ನು ಮೂಡಿಗೇರಿಸಿಕೊಂಡಿದೆ. ಆರು ಚಿನ್ನ, ಏಳು ಬೆಳ್ಳಿ ಮತ್ತು ಏಳು ಕಂಚಿನ ಪದಕಗಳೊಂದಿಗೆ ಭಾರತ ಪ್ರಸ್ತುತ ಪದಕ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page