Friday, June 14, 2024

ಸತ್ಯ | ನ್ಯಾಯ |ಧರ್ಮ

ND TV ನಿರ್ದೇಶಕರ ಸ್ಥಾನಕ್ಕೆ ರಾಧಿಕಾ ರಾಯ್, ಪ್ರಣಯ್ ರಾಯ್ ರಾಜೀನಾಮೆ

ಎನ್‌ಡಿಟಿವಿಯ ಪ್ರವರ್ತಕ ಸಂಸ್ಥೆ RRPR (ರಾಧಿಕಾ ರಾಯ್, ಪ್ರಣಯ್ ರಾಯ್) ಹೋಲ್ಡಿಂಗ್ ಸೋಮವಾರ ತನ್ನ ಈಕ್ವಿಟಿ ಬಂಡವಾಳದ 99.5 ಪ್ರತಿಶತದಷ್ಟು ಷೇರುಗಳನ್ನು ಅದಾನಿ ಸಮೂಹ ಒಡೆತನದ ವಿಶ್ವಪ್ರಧಾನ್ ಕಮರ್ಷಿಯಲ್ (VCPL) ಗೆ ವರ್ಗಾಯಿಸಿದೆ. ಈ ಹಿನ್ನೆಲೆಯಲ್ಲಿ NDTV ಸಂಸ್ಥಾಪಕರಾದ ಪ್ರಣಯ್ ರಾಯ್ ಮತ್ತು ರಾಧಿಕಾ ರಾಯ್ RRPRH ನಿರ್ದೇಶಕರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಪ್ರಣಯ್ ರಾಯ್ ಮತ್ತು ರಾಧಿಕಾ ರಾಯ್ ಅವರ ರಾಜೀನಾಮೆಯನ್ನು NDTV ಮಂಡಳಿಯು ಅಂಗೀಕರಿಸಿದೆ. ಮತ್ತು ತಕ್ಷಣವೇ ಜಾರಿಗೆ ಬರುವಂತೆ ಸಂಜಯ್ ಪುಗಾಲಿಯಾ ಮತ್ತು ಸೆಂಥಿಲ್ ಚೆಂಗಲ್ವರಾಯನ್ ಅವರನ್ನು RRPRH ಮಂಡಳಿಯಲ್ಲಿ ನಿರ್ದೇಶಕರನ್ನಾಗಿ ನೇಮಿಸಿದೆ.

ಷೇರುಗಳ ವರ್ಗಾವಣೆಯು ಆಗಸ್ಟ್ ತಿಂಗಳಿನಲ್ಲಿ NDTV ಯಲ್ಲಿನ 29.18 ರಷ್ಟು ಪಾಲನ್ನು ಅದಾನಿ ಸಮೂಹಕ್ಕೆ ನೀಡುತ್ತದೆ. ನವೆಂಬರ್ 22 ರಂದು ಪ್ರಾರಂಭವಾದ ಷೇರು ಮಾರಾಟದ ಓಪನ್ ಆಫರ್, ಷೇರುದಾರರು 5.3 ಮಿಲಿಯನ್ ಷೇರುಗಳನ್ನು ಅಥವಾ 16.7 ಮಿಲಿಯನ್ ಷೇರುಗಳ ಇಶ್ಯೂ ಗಾತ್ರದ 31.78 ಶೇಕಡಾವನ್ನು ಟೆಂಡರ್ ಮಾಡಿದ್ದಾರೆ ಎಂದು ವಿನಿಮಯ ಡೇಟಾ ತೋರಿಸಿದೆ. ಈ ಮುಕ್ತ ಷೇರು ಮಾರಾಟ ಪ್ರಕ್ರಿಯೆ ಡಿಸೆಂಬರ್ 5 ರಂದು ಮುಕ್ತಾಯಗೊಳ್ಳಲಿದೆ.

ದೇಶದ ಸುದ್ದಿ ವಾಹಿನಿಗಳನ್ನು ಬಹುತೇಕ ಬಿಜೆಪಿ ಬೆಂಬಲಿತ ಬಲಪಂಥೀಯರು ವಶಪಡಿಸಿಕೊಳ್ಳುತ್ತಿರುವುದು ಈಗ ಗುಟ್ಟಾಗಿ ಉಳಿದಿಲ್ಲ. ಅದೇ ರೀತಿಯಲ್ಲಿ ಬಿಜೆಪಿ ಬೆಂಬಲಿತ ಹೊಸ ವಾಹಿನಿಗಳ ಸೃಷ್ಟಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಮೋದಿ ಆಪ್ತ ಉದ್ಯಮಿ ಅದಾನಿ ಒಡೆತನದ ಸಂಸ್ಥೆ ND TV ಯನ್ನು ಸಂಪೂರ್ಣವಾಗಿ ವಶಪಡಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ND TV ಕೂಡಾ ಬಿಜೆಪಿ ಕಪಿಮುಷ್ಟಿಗೆ ಸಿಲುಕಿತಾ ಎಂಬ ಅನುಮಾನಕ್ಕೆ ತೆರೆ ಬಿದ್ದಂತಾಗಿದೆ.

ಇನ್ನು ಸಂಸ್ಥೆಯ ಪ್ರಮುಖ ಮುಖವಾಗಿರುವ ND TV ಮುಖ್ಯಸ್ಥ ರವೀಶ್ ಕುಮಾರ್ ಅವರು ಸಂಸ್ಥೆಯಲ್ಲಿ ಉಳಿಯುವರೇ ಎಂಬುದು ಸಹ ಸದ್ಯ ರಾಜಕೀಯ ವಲಯದಲ್ಲಿ ಎದ್ದಿರುವ ಪ್ರಮುಖ ಪ್ರಶ್ನೆ. ಈ ಹಿಂದೆಯೂ ಅದಾನಿ ಒಡೆತನದ ಸಂಸ್ಥೆ 29.18 ರಷ್ಟು ಷೇರನ್ನು ವಶಪಡಿಸಿಕೊಂಡಾಗಲೂ ಈ ಚರ್ಚೆ ಮುನ್ನೆಲೆಗೆ ಬಂದಿತ್ತು.

Related Articles

ಇತ್ತೀಚಿನ ಸುದ್ದಿಗಳು