ನವದೆಹಲಿ: ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಎರಡು ದಿನ ವಿಶೇಷ ಉಪನ್ಯಾಸ ನೀಡಲು ತೆರಳುತ್ತಿದ್ದಾರೆ, ಜತೆಗೆ ನವದೆಹಲಿಯಲ್ಲಿ ಪ್ರಮುಖ ಸಭೆಗಳಲ್ಲಿ ಭಾಗವಹಿಸುತ್ತಿರುವ ಹಿನ್ನೆಲೆ ಫೆಬ್ರುವರಿ 26 ರಿಂದ ಮಾರ್ಚ್ 1 ರವರೆಗೆ ಐದು ದಿನ ಭಾರತ್ ಜೋಡೊ ನ್ಯಾಯ ಯಾತ್ರೆಗೆ ವಿರಾಮ ನೀಡಲಾಗುತ್ತಿದೆ ಎಂದು ಕಾಂಗ್ರೆಸ್ ಬುಧವಾರ ಪ್ರಕಟಿಸಿದೆ.
ಫೆ. 22 ಮತ್ತು 23ರಂದು ಸ್ಥಳೀಯ ವಿವಿಧ ಕಾರ್ಯಕ್ರಮಗಳ ಭಾಗವಹಿಸುವುದರ ಜೊತೆ ವಿಶ್ರಾಂತಿಯನ್ನು ಪಡೆಯಲಿದ್ದಾರೆ. ಫೆ. 24ರಂದು ಉತ್ತರ ಪ್ರದೇಶದ ಮೊರಾದಾಬಾದ್‌ನಿಂದ ಯಾತ್ರೆ ಪುನರಾರಂಭಗೊಳ್ಳಲಿದೆ. ಸಂಭಾಲ್, ಅಲಿಘರ್, ಹತ್ರಾಸ್ ಮತ್ತು ಆಗ್ರಾ ಜಿಲ್ಲೆಗಳಲ್ಲಿ ಸಂಚರಿಸಲಿದ್ದೇವೆ ಎಂದು ಕಾಂಗ್ರೆಸ್ ವಕ್ತಾರ ಜೈರಾಮ್ ರಮೇಶ್ ತಿಳಿಸಿದ್ದಾರೆ.
ರಾಹುಲ್ ಅವರ ಕಾರ್ಯಕ್ರಮಗಳು ಮುಗಿದ ಮೇಲೆ ಮಾರ್ಚ್ 2 ರಿಂದ ಯಾತ್ರೆ ಮತ್ತೆ ಆರಂಭಗೊಳ್ಳಲಿದೆ, ಮಧ್ಯಪ್ರದೇಶದ ಗ್ವಾಲಿಯರ್, ಉಜ್ಜಯನಿ, ಶಜಾಪುರ ಜಿಲ್ಲೆಗಳಲ್ಲಿ ರ್ಯಾರಲಿ ನಡೆಯಲಿದೆ. ಉಜ್ಜಿಯನಿಯಲ್ಲಿ ರ್ಯಾ್ಲಿ ನಡೆಸುವ ವೇಳೆ ಮಹಾಕಾಳೇಶ್ವರ ದೇವಾಲಯಕ್ಕೆ ರಾಹುಲ್ ಗಾಂಧಿ ಭೇಟಿ ನೀಡಿ ದರ್ಶನ ಪಡೆಯಲಿದ್ದಾರೆ ಎಂದು ಜೈರಾಮ್ ಮಾಹಿತಿ ನೀಡಿದ್ದಾರೆ.