ಸ್ವಿಗ್ಗಿ, ಅಮೆಜಾನ್, ಇನ್‌ಸ್ಟಾಮಾರ್ಟ್ ಗಳ ಮೇಲೆ ದಾಳಿ; ಅವಧಿ ಮೀರಿದ – ಆಹಾರ ಪದಾರ್ಥಗಳು ವಶಕ್ಕೆ

ಬೆಂಗಳೂರು: ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ವಿಶೇಷ ಜಾರಿ ಕಾರ್ಯಾಚರಣೆ ನಡೆಸಿ, ಬೆಂಗಳೂರಿನ ಅಮೆಜಾನ್ ಮತ್ತು ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಕೇಂದ್ರಗಳಿಂದ ಅವಧಿ ಮೀರಿದ ಹಾಗೂ ಸರಿಯಾಗಿ ಲೇಬಲ್ ಮಾಡದ ಆಹಾರ ಉತ್ಪನ್ನಗಳನ್ನು ವಶಪಡಿಸಿಕೊಂಡಿದೆ.ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, 2006 ಹಾಗೂ ಔಷಧ ಮತ್ತು ಸೌಂದರ್ಯವರ್ಧಕಗಳ ಕಾಯ್ದೆ, 1940ರ ಅಡಿಯಲ್ಲಿ ನೇಮಕಗೊಂಡ ಅಧಿಕಾರಿಗಳು ಹಾಗೂ ಆಹಾರ ಸುರಕ್ಷತಾ ಅಧಿಕಾರಿಗಳು ಈ ತಪಾಸಣೆ ನಡೆಸಿದರು. ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ‘ಪೆಪ್ಟೈಡ್ ಪಾರ್ಟಿ’ಗೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ದಾಖಲೆಗಳ ಆಧಾರದ ಮೇಲೆ ಆಹಾರ ಸಂಗ್ರಹಣೆ ಮತ್ತು ಪೂರೈಕೆ ಕೇಂದ್ರಗಳನ್ನು ಅಧಿಕಾರಿಗಳು ಪರಿಶೀಲಿಸಿದರು.

ಆನ್‌ಲೈನ್ ಮತ್ತು ಇ-ಕಾಮರ್ಸ್ ವೇದಿಕೆಗಳ ಮೂಲಕ ಮಾರಾಟವಾಗುವ ಉತ್ಪನ್ನಗಳ ಲೇಬಲಿಂಗ್, ತಯಾರಿಕೆ ಹಾಗೂ ಮುಕ್ತಾಯ ದಿನಾಂಕ, ಬಳಕೆಯ ಅವಧಿ ಮತ್ತು ಇತರ ಆಹಾರ ಸುರಕ್ಷತಾ ಮಾನದಂಡಗಳ ಕುರಿತು ತಪಾಸಣೆ ನಡೆಸಲಾಯಿತು. ಅಗತ್ಯ ಪರವಾನಗಿ ಇಲ್ಲದೆ ಔಷಧಗಳನ್ನು ಸಂಗ್ರಹಿಸಿರುವ ಬಗ್ಗೆಯೂ ಪರಿಶೀಲನೆ ನಡೆಸಲಾಯಿತು.

Related Articles

ಇತ್ತೀಚಿನ ಸುದ್ದಿಗಳು