ರೈಲು ಅಪಘಾತವಾದರೆ, ಸಂತ್ರಸ್ಥರು ಪರಿಹಾರಕ್ಕೆ ಅರ್ಹರು : ಬಾಂಬೆ ಹೈಕೋರ್ಟ್‌

ಮುಂಬೈ : ಪಾದಾಚಾರಿ ಮೇಲ್ಸೇತುವೆ ಇಲ್ಲದೆ ರೈಲ್ವೆ ಅಳಿ ದಾಟುವಾಗ ರೈಲು ಅಪಘಾತದಿಂದ ಮೃತ ಪಟ್ಟರೆ  ಅಥವಾ ಗಾಯಗೊಂಡರೆ ಸಂತ್ರಸ್ತರಿಗೆ ಪಡೆಯುವ ಹಕ್ಕಿದೆ ಎಂದು ಬಾಂಬೆ ಹೈಕೋರ್ಟ್‌ ಆದೇಶ ನೀಡಿದೆ.

ಮನೋಹರ್‌ ಎಂಬ ಯುವಕ ಉದ್ಯೋಗಕ್ಕಾಗಿ ಮಹಾರಾಷ್ಟ್ರದ ಗೊಂಡಿಯಾದಿಂದ ರೆವ್ರಾಲ್‌ಗೆ ಪ್ಯಾಸೆಂಜರ್‌ ರೈಲಿನ ಮೂಲಕ ಪ್ರಯಾಣಿಸುತ್ತಿದ್ದರು. ರೈಲಿನಿಂದ ಇಳಿದು ಹಳಿ ದಾಟಿ ನಿಲ್ದಾಣದಿಂದ ಹೊರಬರುವ ಸಮಯದಲ್ಲಿ ಮೇಲ್ಸೇತುವೆ ಇಲ್ಲದ ಕಾರಣ ರೈಲು ಅಪಘಾತವಾಇ ಮೃತ ಪಟ್ಟಿದ್ದಮು, ಕೆಲ ಪ್ರಯಾಣಿಕರು ಸಹ ಗಾಯಗೊಂಡಿದ್ದರು.

ಈ ಘಟನೆಯ ನಂತರ ಮನೋಹರ್‌ ಅವರ ಪತ್ನಿ ಮತ್ತು ಮಕ್ಕಳು ಪರಿಹಾರ ಕೋರಿ ರೈಲ್ವೆ ಪರಿಹಾರ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣ ಹೈಕೋರ್ಟ್‌ ಮೆಟ್ಟಿಲೇರಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್‌, ಪಾದಾಚಾರಿ ಮೇಲ್ಸೇತುವೆ ಇಲ್ಲದೆ ರೈಲ್ವೆ ಅಳಿ ದಾಟುವಾಗ ರೈಲು ಅಪಘಾತದಿಂದ ಮೃತ ಪಟ್ಟರೆ  ಅಥವಾ ಗಾಯಗೊಂಡರೆ ಸಂತ್ರಸ್ತರಿಗೆ ಪಡೆಯುವ ಹಕ್ಕಿದೆ ಎಂದು ಮಹತ್ವದ ತೀರ್ಪು ನೀಡಿದೆ.

Related Articles

ಇತ್ತೀಚಿನ ಸುದ್ದಿಗಳು