ರಾಜ್ಯದಲ್ಲಿ ರಾಹುಲ್‌  ʼಭಾರತ್‌ ಜೋಡೋʼ ಪಾದಯಾತ್ರೆ: ಡಿಕೆಶಿ ಪೂರ್ವಸಿದ್ದತೆ ಪರಿಶೀಲನೆ

ಚಿತ್ರದುರ್ಗ: ರಾಹುಲ್‌ ಗಾಂಧಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ʼಭಾರತ್‌ ಜೋಡೋʼ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.

ಚಳ್ಳಕೆರೆಯ ಪ್ರವಾಸಿ ಮಂದಿರದಲ್ಲಿ ಇಂದು ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್‌ ಅವರು, 21 ದಿನ ರಾಜ್ಯದಲ್ಲಿರುವ ರಾಹುಲ್‌ ಗಾಂಧಿ ಅವರು 510 KM ಪಾದಯಾತ್ರೆ ನಡೆಸಲಿದ್ದಾರೆ. ಹೀಗಾಗಿ ಪಾದಯಾತ್ರೆ ನಡೆಯಲಿರುವ ಸ್ಥಳಗಳಲ್ಲಿ ಪೂರ್ವಸಿದ್ಧತೆಗಳನ್ನು ಪರಿಶೀಲಿಸುತ್ತಿದ್ದೇನೆ. ಅವರು ಚಿತ್ರದುರ್ಗ ಜಿಲ್ಲೆಗೂ ಬರಲಿದ್ದಾರೆ. ಈ ಹಿನ್ನೆಲೆಯಲ್ಲಿ ಚಳ್ಳಕೆರೆಯಲ್ಲಿ ಸ್ಥಳ ಪರಿಶೀಲನೆ ನಡೆಸಿದ್ದೇನೆ. ಇಲ್ಲಿಂದ ರಾಹುಲ್‌ ಅವರು ಬಳ್ಳಾರಿ, ರಾಯಚೂರಿಗೆ ತೆರಳಿ ಅಲ್ಲಿಂದ ತೆಲಂಗಾಣ ಪ್ರವೇಶಿಸಲಿದ್ದಾರೆ ಎಂದು ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು