ಖ್ಯಾತ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಇಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮುಂಬೈನ ಅಂಬಾನಿ ಮಾಲೀಕತ್ವದ ಕೋಕಿಲಾ ಬೇನ್ ಆಸ್ಪತ್ರೆಯಲ್ಲಿ ದೀಪಿಕಾ ಪಡುಕೋಣೆಗೆ ಹೆರಿಗೆಯಾಗಿದೆ. ನಿಗದಿತ ದಿನಾಂಕದಿಂದ 20 ದಿನ ಮೊದಲೇ ಹೆರಿಗೆ ಆಗಿರುವುದಾಗಿ ಆಸ್ಪತ್ರೆ ಮೂಲಗಳು ತಿಳಿಸಿವೆ.
ಸೆಪ್ಟೆಂಬರ್ 7 ರಂದು ಸಂಜೆ 5 ಗಂಟೆ ಸುಮಾರಿಗೆ ದೀಪಿಕಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ನಟಿಯನ್ನು ತನ್ನ ತಾಯಿ ಉಜ್ಜಲಾ ಪಡುಕೋಣೆ ಅವರೊಂದಿಗೆ ಮುಂಬೈನ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಶನಿವಾರ ಆಸ್ಪತ್ರೆಗೆ ಹೋಗುವಾಗ ನಟಿಯ ಹಲವಾರು ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು.
ಆ ನಂತರ ಹಲವು ಮಾಧ್ಯಮಗಳು ಮತ್ತು ನೆಟ್ಟಿಗರು ಗಣೇಶ ಹಬ್ಬದಂದೇ ದೀಪಿಕಾ ಮಗುವಿಗೆ ಜನ್ಮ ನೀಡುವರೆಂದು ಬರೆದುಕೊಂಡಿದ್ದವು. ಆದರೆ ಹಬ್ಬದ ಮಾರನೇ ದಿನ ದೀಪಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.