ರಾಷ್ಟ್ರಧ್ವಜದ ಮೇಲೆ ಕಾಂಗ್ರೆಸ್ ಗೆ ಹೆಚ್ಚು ಹಕ್ಕು: ಡಿಕೆಶಿ

ಬೆಂಗಳೂರು: ದೇಶಕ್ಕೆ ಸ್ವಾತಂತ್ರ್ಯ ಬಂದಿರುವುದರಲ್ಲಿ ಕಾಂಗ್ರೆಸ್‌ ನಾಯಕರ ತ್ಯಾಗ, ಬಲಿದಾನ ಬಹು ಮುಖ್ಯ ಪಾತ್ರವಾಗಿರುವುದರಿಂದ ರಾಷ್ಟ್ರಧ್ವಜ, ರಾಷ್ಟ್ರಗೀತೆ, ಸಂವಿಧಾನದ ಮೇಲೆ ಹೆಚ್ಚು ಅಧಿಕಾರ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್‌ ಹೇಳಿದ್ದಾರೆ.

ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಸ್ವಾತಂತ್ರ್ಯ ಅಮೃತ ಮಹೋತ್ಸವ ಮೊದಲು ಘೋಷಿಸಿದ್ದು ಕಾಂಗ್ರೆಸ್‌, ನಂತರ ಬಿಜೆಪಿಯವರು ʼಹರ್‌ ಘರ್‌ ತಿರಂಗʼ ಕಾರ್ಯಕ್ರಮದ ಹೆಸರಲ್ಲಿ ರಾಷ್ಟ್ರಧ್ವಜವನ್ನು ಉಚಿತವಾಗಿ ಕೊಡುವ ಬದಲು 25 ರೂ. ಗಳಿಗೆ ಮಾರುತ್ತಿರುವುದು ನಾಚಿಕೆಗೇಡಿನ ಸಂಗತಿ, ಏಕೆಂದರೆ ರಾಷ್ಟ್ರಧ್ವಜ ಮಾರಾಟದ ವಸ್ತುವಲ್ಲ ಎಂದು ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು