Home ಸಿನಿಮಾ ʼಬ್ರೋಕೋಡ್‌ʼ ಮೂಲಕ ನಿರ್ಮಾಣಕ್ಕಿಳಿದ ರವಿ ಮೋಹನ್

ʼಬ್ರೋಕೋಡ್‌ʼ ಮೂಲಕ ನಿರ್ಮಾಣಕ್ಕಿಳಿದ ರವಿ ಮೋಹನ್

0

ತಮಿಳು ಚಿತ್ರರಂಗದ ಪ್ರತಿಭಾನ್ವಿತ ನಟ ರವಿ ಮೋಹನ್‌ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಬ್ರೋಕೋಡ್‌ ಎಂಬ ಚಿತ್ರ ಅನೌನ್ಸ್‌ ಮಾಡಿರುವ ಅವರೀಗ, ನಿರ್ಮಾಣದ ಜವಾಬ್ದಾರಿ ಕೂಡ ಹೊತ್ತುಕೊಂಡಿದ್ದಾರೆ. ಇತ್ತೀಚೆಗೆಷ್ಟೇ ತಮ್ಮದೇ ನಿರ್ಮಾಣ ಸಂಸ್ಥೆ ಬಗ್ಗೆ ಮಾಹಿತಿ ನೀಡಿದ್ದ ರವಿ ಮೋಹನ್‌ ಆ ಸಂಸ್ಥೆಯ ಚೊಚ್ಚಲ ಚಿತ್ರ ಯಾವುದು ಎಂಬ ಕುತೂಹಲಕ್ಕೆ ತೆರೆ ಎಳೆದಿದ್ದಾರೆ. ರವಿ ಮೋಹನ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಬ್ರೋಕೋಡ್‌ ಗೆ ಅವರೇ ನಾಯಕ.

ಡಿಕ್ಕಿಲೂನಾ ಮತ್ತು ವಡಕ್ಕುಪಟ್ಟಿ ರಾಮಸಾಮಿಯಂತಹ ಚಿತ್ರಗಳ ನಿರ್ದೇಶಕ ಕಾರ್ತಿಕ್ ಯೋಗಿ ‘ಬ್ರೋಕೋಡ್’ ಸಿನಿಮಾಗೆ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ರವಿ ಮೋಹನ್‌ ಜೊತೆಗೆ ಎಸ್‌ ಜೆ ಸೂರ್ಯ ಹಾಗೂ ನಾಲ್ವರು ಪ್ರಮುಖ ನಟಿಯರು ಈ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಅವರು ಯಾರು ಅನ್ನೋದನ್ನು ಚಿತ್ರತಂಡ ರಿವೀಲ್‌ ಮಾಡಿಲ್ಲ. ಪೊರ್ ತೋಝಿಲ್ ಚಿತ್ರದ ಮೂಲಕ ಹೆಸರುವಾಸಿಯಾದ ಕಲೈಸೆಲ್ವನ್ ಶಿವಾಜಿ ಅವರ ಛಾಯಾಗ್ರಹಣ ಈ ಚಿತ್ರಕ್ಕೆ ಇರಲಿದೆ.

ಅನಿಮಲ್ ಮತ್ತು ಅರ್ಜುನ್ ರೆಡ್ಡಿಯಂತಹ ಹಿಟ್‌ಗಳ ಸಂಗೀತ ನಿರ್ದೇಶಕ ಹರ್ಷವರ್ಧನ್ ಮ್ಯೂಸಿಕ್‌, ಪ್ರದೀಪ್ ಇ. ರಾಘವ್ ಸಂಕಲನ, ಎ. ರಾಜೇಶ್ ಕಲಾ ನಿರ್ದೇಶನ ‘ಬ್ರೋಕೋಡ್’ ಸಿನಿಮಾದಲ್ಲಿ ಇರಲಿದೆ. ಇದೊಂದು ಪಕ್ಕ ಫ್ಯಾಮಿಲಿ ಎಂಟರ್‌ ಟೈನರ್‌ ಜೊತೆಗೆ ಕಾಮಿಡಿ ಜಾನರ್‌ ಕಥೆಯನ್ನು ಒಳಗೊಂಡಿದೆ.
‘ಬ್ರೋಕೋಡ್’ ಸಿನಿಮಾಗೆ ಮಾತನಾಡಿದ ನಿರ್ದೇಶಕ ಕಾರ್ತಿಕ್ ಯೋಗಿ, “ನಾನು ರವಿ ಮೋಹನ್ ಅವರಿಗೆ ಕಥೆಯನ್ನು ಹೇಳಿದಾಗ, ಅವರು ಅದನ್ನು ಸಂಪೂರ್ಣವಾಗಿ ಆನಂದಿಸಿದರು ಮತ್ತು ತಕ್ಷಣವೇ ಅದನ್ನು ನಿರ್ಮಿಸಲು ಮುಂದೆ ಬಂದರು” ಎಂದು ಹೇಳಿದ್ದಾರೆ.

ಚಿತ್ರದ ಚಿತ್ರೀಕರಣ ಸೆಪ್ಟೆಂಬರ್‌ನಲ್ಲಿ ಪ್ರಾರಂಭವಾಗಲಿದೆ. ಇನ್ನೂ, ರವಿ ಮೋಹನ್ ಸುಧಾ ಕೊಂಗರ ನಿರ್ದೇಶನದ ಪರಾಶಕ್ತಿ ಮತ್ತು ಗಣೇಶ್ ಕೆ. ಬಾಬು ನಿರ್ದೇಶನದ ಕರಾಟೆ ಬಾಬು ಚಿತ್ರಗಳಲ್ಲಿಯೂ ನಟಿಸುತ್ತಿದ್ದಾರೆ. ಇದೀಗ ಅವರು ಮತ್ತೊಂದು ಸಿನಿಮಾ ಘೋಷಣೆ ಮಾಡಿರುವುದು ಅವರ ಫ್ಯಾನ್ಸ್‌ ಖುಷಿ ಕೊಟ್ಟಿದೆ.

You cannot copy content of this page

Exit mobile version