2000 ರೂ. ನೋಟ್ ಚಲಾವಣೆ ಸ್ಥಗಿತ : ಪಿಂಕ್ ನೋಟ್ ವಾಪಸ್ ಪಡೆದ RBI

ಎರಡು ಸಾವಿರ ರೂ ಮುಖಬೆಲೆಯ ನೋಟುಗಳನ್ನು ಇನ್ನು ಮುಂದೆ ಮುದ್ರಿಸುವುದಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಧರಿಸಿದೆ. ಅಲ್ಲದೆ ಚಲಾವಣೆಯಲ್ಲಿರುವ ನೋಟುಗಳನ್ನು ಹಿಂತೆಗೆದುಕೊಳ್ಳುವುದಾಗಿ ತಿಳಿಸಿದೆ.

ಹೌದು, RBI ಶುಕ್ರವಾರ ಈ ಹೇಳಿಕೆ ನೀಡಿದೆ. ಜನರ ಬಳಿ ಇರುವ 2000 ನೋಟುಗಳನ್ನು ಬ್ಯಾಂಕ್​ಗಳಿಗೆ ಹೋಗಿ ವಿನಿಮಯ ಮಾಡಿಕೊಳ್ಳುವಂತೆ ಸೂಚನೆ ನೀಡಿದೆ. ಆರ್​ಬಿಐ ನೀಡಿರುವ ಮಾಹಿತಿ ಪ್ರಕಾರ 2023 ಸೆಪ್ಟಂಬರ್ 30ರೊಳಗೆ 2,000 ಮುಖಬೆಲೆಯ ನೋಟುಗಳನ್ನು ವಾಪಸ್ ಕೊಟ್ಟು ವಿನಿಮಯ ಮಾಡಿಕೊಳ್ಳಬಹುದು.

ಪ್ರಧಾನಿ ಮೋದಿ ನಡು ರಾತ್ರಿ ನೋಟ್ ಬ್ಯಾನ್ ಮಾಡಿದ ನಂತರ 2,000 ರೂಪಾಯಿಯ ಈ ನೋಟನ್ನು ನವೆಂಬರ್ 2016 ರಲ್ಲಿ ಪರಿಚಯಿಸಲಾಗಿತ್ತು. ಈಗ ಚಲಾವಣೆಯಲ್ಲಿರುವ 2,000ರೂ ಮುಖಬೆಲೆಯ ನೋಟುಗಳಲ್ಲಿ ಶೇ. 89ರಷ್ಟು ನೋಟುಗಳನ್ನು 2017ರ ಮಾರ್ಚ್​ಗೆ ಮುಂಚೆ ಮುದ್ರಿಸಿ ಬಿಡುಗಡೆ ಮಾಡಿದಂತವು. 2000 ಮುಖಬೆಲೆಯ ಈ ನೋಟುಗಳನ್ನು 2018-19 ಪ್ರಿಂಟ್​ ಮಾಡುವುದನ್ನ ಆರ್​ಬಿಐ ನಿಲ್ಲಿಸಿತ್ತು. ಈಗ ಅಧಿಕೃತವಾಗಿ RBI ಫ್ರಿಂಟ್ ಮಾಡುವುದನ್ನು ಹಾಗೂ ಜನರು ಚಲಾವಣೆಯಲ್ಲಿರುವ ನೋಟುಗಳನ್ನು ಹಿಂಪಡೆಯುವ ನಿರ್ಧಾರ ತರಗೆದುಕೊಂಡಿದೆ.

ನವೆಂಬರ್ 8 2016 ರಂದು ನಡು ರಾತ್ರಿ ಪ್ರಧಾನಿ ಮೋದಿ ಅವರು ದೇಶದಲ್ಲಿ ಚಾಲಾವಣೆಯಲ್ಲಿದ್ದ 500 ಹಾಗೂ 1000ರೂ ಮುಖಬೆಲೆಯ ನೋಡುಗಳನ್ನು ಬ್ಯಾನ್ ಮಾಡಿದ ನಂತರ ಸಾಮಾನ್ಯ ಜನರು, ಕೂಲಿ ಕಾರ್ಮಿಕರು, ರೈತಾಪಿ ಜನರು ಹೇಗೆಲ್ಲ ಕಷ್ಟ ಪಟ್ಟುರು ಎಂಬುದನ್ನು ನೋಡಿದ್ದೀರಿ. ಈಗ ಮತ್ತೆ 2000 ಮುಖಬೆಲೆಯ ನೋಡುಗಳನ್ನು ಚಲಾವಣೆ ನಿಲ್ಲಿಸುವುದಾಗಿ RBI ಹೇಳಿದ್ದು ಇದೊಂದು ತರ ನೋಟ್ ಬ್ಯಾನ್ ಅಂತಲೇ ಹೇಳಬಹುದು. ಎರಡು ಸಾವಿರ ಮುಖಬೆಲೆಯ ಮುದ್ರಣ ಮತ್ತು ಚಲಾವಣೆ ಎರಡನ್ನು ನಿಲ್ಲಿಸಿ ಇಂದು RBI ಪ್ರಕಟಣೆ ಹೊರಡಿಸಿದೆ.

Related Articles

ಇತ್ತೀಚಿನ ಸುದ್ದಿಗಳು