Home ಬೆಂಗಳೂರು ಕಾವೇರಿ ನೀರು ಹಂಚಿಕೆ ಸಂಭಂಧ – ರಾಜ್ಯದ ಜನರ ಹಿತ ಕಾಪಾಡುವುದೇ ನಮ್ಮ ಆದ್ಯತೆ –...

ಕಾವೇರಿ ನೀರು ಹಂಚಿಕೆ ಸಂಭಂಧ – ರಾಜ್ಯದ ಜನರ ಹಿತ ಕಾಪಾಡುವುದೇ ನಮ್ಮ ಆದ್ಯತೆ – ಸಿಎಂ ಡಿ.ಕೆ. ಶಿವಕುಮಾರ್‌ 

ಬೆಂಗಳೂರು : ಕರ್ನಾಟಕ (Karnataka) ರಾಜ್ಯದ ಜನರ,ರೈತರ ಹಿತ ಕಾಪಾಡುವುದೇ ನಮ್ಮ ಸರ್ಕಾರದ ಆದ್ಯತೆಯ ಕರ್ತವ್ಯವಾಗಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್‌ (DK Shivakumar) ಹೇಳಿದ್ದಾರೆ. ಶುಕ್ರವಾರ ಕಾವೇರಿ (Cauvery issue) ವಿವಾದದ ಬಗ್ಗೆ  ತುರ್ತು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು,ರಾಜ್ಯದ ವಿರುದ್ದ ಬಂಧಿರುವ ಆದೇಶಗಳನ್ನ ವಿರೋಧಿಸಿ ಅಪೀಲು ಹೋಗಲು ನಿರ್ಧರಿಸಿರುವುದಾಗಿ ತಿಳಿಸಿದರು.

ನಾವು ಈಗಾಗಲೇ ಆದೇಶಗಳನ್ನು ಗಮನಿಸಿದ್ದೇವೆ. 15 ದಿನಗಳಲ್ಲಿ 3.5 ಸಾವಿರ ಕ್ಯೂಸೆಕ್ಸ್‌ ನೀರು ಬಿಡಬೇಕೆಂದು ಆದೇಶಿಸಲಾಗಿದೆ. 2013 ರಿಂದ ಇದುವರೆಗೂ ಕೊಟ್ಟಿರುವ ಆದೇಶಗಳೂ ಸಹ ನಮ್ಮ ಗಮನದಲ್ಲಿದೆ.

ಕಳೆದ ಮೂರು ವರ್ಷಗಳಿಂದ ನಮಗೆ ಮಳೆ ಕಡಿಮೆಯಾಗಿದೆ. ಸ್ವತಃ ಕೆಆರ್‌ಎಸ್‌ ಗೆ ಸಿದ್ದರಾಮಯ್ಯ ಅವರೊಂದಿಗೆ ತೆರಳಿ ಪರಿಶೀಲನೆ ನಡೆಸಿದ್ದೇವೆ. 170 ಟಿಎಂಸಿ ನೀರು ಬಿಡಬೇಕಾದ ಜಾಗದಲ್ಲಿ 400 ಟಿಎಂಸಿ ನೀರು ಬಿಟ್ಟಿದ್ದೇವೆ. ಇಂದು ನಾವೇ ಸಂಕಷ್ಟದಲ್ಲಿದ್ದೇವೆ.

ಬಿಜೆಪಿಯವರು ನಾವು ಸ್ಥಳಕ್ಕೇ ತೆರಳಿಲ್ಲ ಎಂದು ಗಲಾಟೆ ಮಾಡಿದ್ದಾರೆ. ನಾನು ಅವರಿಗೆ ಉತ್ತರ ಕೊಡುವ ಅವಶ್ಯಕತೆಯಿಲ್ಲ. ಆದರೆ ನಾನು ರಾಜ್ಯದ ಜನರಿಗೆ ಉತ್ತರ ಕೊಡುತ್ತಿದ್ದೇನೆ. ಸಿಆರ್‌ಡಬ್ಲುಸಿ ನಡೆಸಿರುವ ಎಲ್ಲಾ ಸಭೆಯಲ್ಲೂ ಖುದ್ದಾಗಿ ಭಾಗವಹಿಸಿದ್ದೇವೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕೂಡ ನಮ್ಮೊಡನೆ ಇದ್ದರು ಎಂದು ಡಿ.ಕೆ ಶಿವಕುಮಾರ್‌ ಹೇಳಿದ್ದಾರೆ.

ಸಿಡಬ್ಲುಎಂಎ ಅವರ ಎದುರು ನಮ್ಮ ಸರ್ಕಾರದ ಕಾರ್ಯದರ್ಶಿ ಖುದ್ದಾಗಿ ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. ಕಾವೇರಿಯ ಒಳಹರಿವನ್ನು ಮುಚ್ಚಿಡಲು ಸಾಧ್ಯವಿಲ್ಲ. ಇದು ಎಲ್ಲರಿಗೂ ಗೊತ್ತಿರುವ ಸಂಗತಿ. ಹೀಗಾಗಿ ಆದೇಶವನ್ನು ಪಾಲಿಸಲು ಕೊಂಚ ಕಾಲಾವಕಾಶ ಕೇಳಿದ್ದೇವೆ ಎಂದು ಸಿಎಂ ಹೇಳಿದರು.

ನಮ್ಮ ರಾಜ್ಯದ ಎಲ್ಲಾ ಜಲಾಶಯಗಳಲ್ಲೂ ಸಹ ನೀರಿನ ಕೊರತೆ ಉಂಟಾಗಿದೆ. ಪ್ರತಿಯೊಂದು ಜಲಾಶಯದ ವಸ್ತುಸ್ಥಿತಿ ನಮ್ಮ ಕಣ್ಣೆದುರೇ ಇದೆ. ಇದನ್ನು ಗಮನಿಸಿ ಸಿಡಬ್ಲುಎಂಎ ನೀಡಿರುವ ಆದೇಶವನ್ನು ಪಾಲಿಸಲು ನಮಗೆ ಕಷ್ಟವಾಗುತ್ತಿದೆ. ರಾಜ್ಯದ ಜನರ ಮತ್ತು ರೈತರ ಹಿತವನ್ನು ಕಾಪಾಡುವ ದೃಷ್ಟಿಯಿಂದ ಕೆರೆಗಳನ್ನು ತುಂಬಿಸುವುದ, ಕುಡಯುವ ನೀರಿನ ವ್ಯವಸ್ಥೇ ಮುಂತಾದವುಗಳ ಬಗ್ಗೆ ಗಮನ ಹರಿಸಲಾಗಿದೆ ಎಂದು ಸಿಎಂ ನುಡಿದರು.

ನಮ್ಮ ಕಾನೂನು ತಜ್ಞರೊಂದಿಗೆ ಈಗಾಗಲೇ ಸರ್ಕಾರದ ಪ್ರಮುಖ ಸಚಿವರೆಲ್ಲರೂ ಸೇರಿದಂತೆ ಚರ್ಚೆ ನಡೆಸಿದ್ದೇವೆ. ಅವರ ಅಭಿಪ್ರಾಯವನ್ನು ಆಧರಿಸಿ ಮುಂದಿನ ತೀರ್ಮಾನವನ್ನು ತೆಗೆದುಕೊಳ್ಳಲಾಗುವುದು ಎಂದು ಸಿಎಂ ಹೇಳಿದ್ಧಾರೆ.

ಇದರ ನಡುವೆ ತಮಿಳುನಾಡಿನ ಸಿಎಂ ವಿಜಯ್‌ ಇಲ್ಲಿಗೆ ಬಂದು ಚರ್ಚೆ ನಡೆಸುವ ಆಶಯ ವ್ಯಕ್ತಪಡಿಸಿದ್ದಾರೆ. ಅವರ ಸರ್ಕಾರದ ಮುಖ್ಯ ಕಾರ್ಯದರ್ಶಿಯೊಂದಿಗೆ ಮಾತುಕತೆ ನಡೆಯುತ್ತಿದೆ. ಅವರ ರಾಜ್ಯದ ಹಿತ ಕಾಪಾಡಲು ಅವರು ಬದ್ದವಾಗಿದ್ದಾರೆ. ನಾವೂ ಸಹ ಅದೇ ರೀತಿ ಯೋಚಿಸುತ್ತಿದ್ದೇವೆ. ಇಬ್ಬರೂ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲು ಸಾಧ್ಯವೇ ಎಂಬುದರ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಸಿಎಂ ನುಡಿದರು.

You cannot copy content of this page

Exit mobile version