Tuesday, April 1, 2025

ಸತ್ಯ | ನ್ಯಾಯ |ಧರ್ಮ

ಪ್ರಮುಖ ಸ್ಥಳಗಳಿಗೆ RSS ನಾಯಕರ ಹೆಸರುಗಳ ಮರು ನಾಮಕರಣ: ಉತ್ತರಾಖಂಡ ಸಿಎಂ ಘೋಷಣೆ

ಡೆಹ್ರಾಡೂನ್: ಹರಿದ್ವಾರ, ಡೆಹ್ರಾಡೂನ್, ನೈನಿತಾಲ್ ಹಾಗೂ ಉಧಮ್ ಸಿಂಗ್ ನಗರ ಜಿಲ್ಲೆಗಳಲ್ಲಿರುವ 11 ಸ್ಥಳಗಳ ಹೆಸರುಗಳನ್ನು ಮರು ನಾಮಕರಣ ಮಾಡಲಾಗುವುದು ಎಂದು ಸೋಮವಾರ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಘೋಷಿಸಿದ್ದಾರೆ.

ಈ 11 ಸ್ಥಳಗಳ ಹೆಸರನ್ನು ಹಿಂದೂ ದೇವತೆಗಳು, ಖ್ಯಾತನಾಮರು, ಪೌರಾಣಿಕ ವ್ಯಕ್ತಿಗಳು ಹಾಗೂ ಬಿಜೆಪಿ ಮತ್ತು ಆರೆಸ್ಸೆಸ್‌ ನ ಪ್ರಮುಖ ನಾಯಕರ ಹೆಸರುಗಳೊಂದಿಗೆ ಮರು ನಾಮಕರಣ ಮಾಡುವುದು ನನ್ನ ಬಹಳ ದಿನಗಳ ಉದ್ದೇಶವಾಗಿದ್ದು, ಅದೀಗ ಈಡೇರುತ್ತಿದೆ ಎಂದು ಅವರು ಹೇಳಿದ್ದಾರೆ.

“ಸಾರ್ವಜನಿಕರ ಭಾವನೆಗಳು, ಭಾರತದ ಸಂಸ್ಕೃತಿ ಮತ್ತು ಪರಂಪರೆಯ ಅನುಸಾರ ವಿವಿಧ ಸ್ಥಳಗಳ ಹೆಸರುಗಳನ್ನು ಬದಲಿಸಲಾಗುವುದು. ಅವುಗಳಿಗೆ ಭಾರತದ ಸಂಸ್ಕೃತಿಗೆ ಕೊಡುಗೆ ನೀಡಿದ ಹಾಗೂ ಅದನ್ನು ರಕ್ಷಿಸಿದ ಖ್ಯಾತ ವ್ಯಕ್ತಿಗಳ ಹೆಸರನ್ನು ಇಡಲಾಗುವುದು” ಎಂದು ಅವರು ಮಾಹಿತಿ ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page