ರೇಣುಕಾಸ್ವಾಮಿ ಕೊಲೆ ಪ್ರಕರಣ; ಮೂವರು ಆರೋಪಿಗಳ ಬಿಡುಗಡೆ

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿದ್ದ ನಟ ದರ್ಶನ್ ಗ್ಯಾಂಗ್ ನ ಮೂವರು ಆರೋಪಿಗಳು ಇಂದು ಜೈಲಿನಿಂದ ಬಿಡುಗಡೆ ಆಗಿದ್ದಾರೆ.

ಬೆಂಗಳೂರಿನ ಗಿರಿನಗರದ ಅರ್. ಕೇಶವಮೂರ್ತಿ, ವಿ. ಕಾರ್ತಿಕ್ ಮತ್ತು ಬಿಜಿ ರಸ್ತೆಯ ಎಲ್. ನಿಖಿಲ್ ನಾಯಕ್ ಅವರಿಗೆ ಕಳೆದ 10 ದಿನಗಳ ಕೆಳಗೆ ಜಾಮೀನು ಮಂಜೂರಾಗಿತ್ತು. ಹೈಕೋರ್ಟ್ ಷರತ್ತುಬದ್ಧ ಜಾಮೀನಿನ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲಾ ಕಾರಾಗೃಹದಿಂದ ಮೂವರು ಆರೋಪಿಗಳು ಇಂದು ರಿಲೀಸ್ ಆಗಿದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿ ತುಮಕೂರು ಜೈಲಿನಲ್ಲಿದ್ದ ನಟ ದರ್ಶನ್ ಅವರ ಮೂವರು ಸಹಚರರು ಇಂದು ಜೈಲಿನಿಂದ ಬಿಡುಗಡೆ ಆಗಿದ್ದಾರೆ..

Related Articles

ಇತ್ತೀಚಿನ ಸುದ್ದಿಗಳು