ಕರೆನ್ಸಿ ನೋಟುಗಳ ಮೇಲೆ ಗಣೇಶ್ ಜೀ, ಲಕ್ಷ್ಮಿ ಜೀ ಫೋಟೋ ಹಾಕುವಂತೆ ಕೇಂದ್ರಕ್ಕೆ ಮನವಿ: ಅರವಿಂದ್ ಕೇಜ್ರಿವಾಲ್

ಹೊಸದಿಲ್ಲಿ: ನಮ್ಮ ಕರೆನ್ಸಿ ನೋಟುಗಳ ಮೇಲೆ ಶ್ರೀ ಗಣೇಶ್ ಜೀ ಮತ್ತು ಶ್ರೀ ಲಕ್ಷ್ಮಿ ಜೀ ಅವರ ಫೋಟೋವನ್ನು ಹಾಕುವಂತೆ ನಾನು ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಅವರಿಗೆ ಮನವಿ ಮಾಡುತ್ತೇನೆ ಎಂದು ದೆಹಲಿ ಮುಖ್ಯಮಂತ್ರಿ ಮತ್ತು ಆಪ್ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಹೇಳಿದ್ದಾರೆ.

ಇಂಡೋನೇಷ್ಯಾ ಇದನ್ನು ಮಾಡಲು ಸಾಧ್ಯವಾಗಿದೆ ಅಂದರೆ ನಾವು ಕೂಡ ಗಣೇಶ್ ಜೀ ಅವರನ್ನು ಆಯ್ಕೆ ಮಾಡಿಕೊಳ್ಳಬಹುದು.

ನಾನು ಕೇಂದ್ರಕ್ಕೆ ನಾಳೆ ಅಥವಾ ಮರುದಿನ ಪತ್ರ ಬರೆದು ಮನವಿ ಮಾಡುತ್ತೇನೆ. ದೇಶದ ಆರ್ಥಿಕ ಪರಿಸ್ಥಿತಿ ಇತ್ಯರ್ಥಕ್ಕೆ ಪಣ ತೊಡುವುದರ ಹೊರತಾಗಿ ಪರಮಾತ್ಮನ ಆಶೀರ್ವಾದ ಬೇಕು ಎಂದು ಅರವಿಂದ್ ಕೇಜ್ರಿವಾಲ್ ಅವರು ಹೇಳಿದಾರೆ.

Related Articles

ಇತ್ತೀಚಿನ ಸುದ್ದಿಗಳು