ಕೊಳ್ಳೇಗಾಲ : ತಾಲೂಕಿನ ಕಾಮಗೆರೆ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ನ್ಯಾಯಬೆಲೆ ಅಂಗಡಿಯಲ್ಲಿ ಕಲ್ಲು ಮಿಶ್ರಿತ ಕಳಪೆ ರಾಗಿ ವಿತರಣೆ ಮಾಡಲಾಗಿದೆ ಎಂಬ ಪೀಪಲ್ ಮೀಡಿಯಾ ವರದಿಗೆ ತಕ್ಷಣ ಸ್ಪಂದನೆಯಾಗಿದೆ.ತಾಲೂಕು ಆಹಾರ ನಿರೀಕ್ಷಕ ಎನ್.ಎಂ. ಪ್ರಸಾದ್ ಅವರು ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಹಕ ಮಧು ಅವರಿಗೆ ನೀಡಿದ್ದ ಕಳಪೆ ರಾಗಿಯನ್ನು ವಾಪಸ್ ಪಡೆದು, ಪಡಿತರದಾರರನ್ನು ಅಂಗಡಿಗೆ ಕರೆಸಿ ಶುದ್ಧವಾದ ಉತ್ತಮ ಗುಣಮಟ್ಟದ ರಾಗಿಯನ್ನು ವಿತರಣೆ ಮಾಡಲಾಗಿದೆ.ಇನ್ನು ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇನೆ. ಆಗಿರುವ ಘಟನೆಗೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಆಹಾರ ನಿರೀಕ್ಷಕ ಎನ್.ಎಂ. ಪ್ರಸಾದ್ ಅವರು ತಿಳಿಸಿದ್ದಾರೆ.ಪೀಪಲ್ ಮೀಡಿಯಾ ವರದಿಯಿಂದಾಗಿ ನ್ಯಾಯ ಸಿಕ್ಕಿದ್ದಕ್ಕೆ ಗ್ರಾಹಕರು ಹಾಗೂ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.
ವರದಿ: ನಾಗೇಂದ್ರ ಪ್ರಸಾದ್
