Thursday, June 20, 2024

ಸತ್ಯ | ನ್ಯಾಯ |ಧರ್ಮ

ಭಾರತದ ಹ್ಯಾಕಿಂಗ್‌ ಕಂಪನಿ ಬಗ್ಗೆ ಲೇಖನ ಡಿಲಿಟ್‌ ಮಾಡಿದ ರಾಯಿಟರ್ಸ್:‌ ದೆಹಲಿ ನ್ಯಾಯಾಲಯದ ಆದೇಶ

ಬೆಂಗಳೂರು: ದೆಹಲಿ ನ್ಯಾಯಾಲಯದ ಆದೇಶದ ಮೇರೆಗೆ ಸುದ್ದಿ ಸಂಸ್ಥೆ ರಾಯಿಟರ್ಸ್ ವಿಶ್ವಮಟ್ಟದಲ್ಲಿ ಪ್ರಮುಖ ವ್ಯಕ್ತಿಗಳ ಡೇಟಾವನ್ನು ಕದ್ದಿರುವ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯೊಂದರ ಕುರಿತು ಪ್ರಕಟಿಸಿದ ಲೇಖನವನ್ನು ತಾತ್ಕಾಲಿಕವಾಗಿ ತೆಗೆದುಹಾಕಿದೆ.

ಆದರೆ, ಈ ವರದಿಗೆ ಸಂಸ್ಥೆಯು ಬದ್ಧವಾಗಿದೆ ಎಂದಿರುವ ರಾಯಿಟರ್ಸ್‌, ಈ ಆದೇಶವನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಮುಂದಾಗಿದೆ.

” “How an Indian startup hacked the world” ” ಎಂಬ ಲೇಖನವನ್ನು ನವೆಂಬರ್ 16 ರಂದು ಪ್ರಕಟಿಸಲಾಗಿತ್ತು. ಸದ್ಯ ದೆಹಲಿ ನ್ಯಾಯಾಲಯದ ಆದೇಶದ ಪ್ರಕಾರ ಡಿಸೆಂಬರ್ 5 ರಂದು ಈ ಲೇಖನವನ್ನು ತೆಗೆದುಹಾಕಲಾಗಿದೆ.

ನವದೆಹಲಿ ಮೂಲದ ಮಾಹಿತಿ ತಂತ್ರಜ್ಞಾನ ಕಂಪನಿ ಅಪ್ಪಿನ್ (Appin) ದೊಡ್ಡ ಪ್ರಮಾಣದಲ್ಲಿ ಹ್ಯಾಕಿಂಗ್ ಮಾಡಿ, ರಾಜಕೀಯ ನಾಯಕರು, ಅಂತರರಾಷ್ಟ್ರೀಯ ಅಧಿಕಾರಿಗಳು ಮತ್ತು ವಕೀಲರ ಡೇಟಾವನ್ನು ಕದ್ದಿದೆ ಎಂದು ಲೇಖನದಲ್ಲಿ ಆರೋಪಿಸಲಾಗಿತ್ತು. ಲೇಖನವು ಕಂಪನಿಯ ಈ ಕೆಲಸವನ್ನು “ವಿಶ್ವದಾದ್ಯಂತ ಹಬ್ಬಿರುವ ವಿಸ್ತಾರವಾದ ಸೈಬರ್ ದಂಧೆಯ ಕಾರ್ಯಾಚರಣೆ ­ a sprawling cyber-mercenary operation that extended across the world ” ಎಂದು ವಿವರಿಸಿದೆ.

ಡಿಸೆಂಬರ್ 4 ರಂದು, ದೆಹಲಿಯ ರೋಹಿಣಿ ನ್ಯಾಯಾಲಯದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು ಪ್ರಕರಣದ ಮೊದಲ ಓದಿನಲ್ಲಿಯೇ, ಈ ಲೇಖನವು “ಮಾನನಷ್ಟವನ್ನು ಉಂಟುಮಾಡುತ್ತದೆ” ಮತ್ತು ರಾಯಿಟರ್ಸ್ ತಮ್ಮ ವೆಬ್‌ಸೈಟ್‌ನಿಂದ ಇದನ್ನು ಡಿಲಿಟ್‌ ಮಾಡುವಂತೆ ಸೂಚಿಸಿದೆ. ಆದರೆ, ಸುದ್ದಿ ವೆಬ್‌ಸೈಟ್‌ಗೆ ಈ ವಿಚಾರದ ಬಗ್ಗೆ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶವಿದೆ ಎಂದು ಕೋರ್ಟ್ ಹೇಳಿದೆ.

ರಾಯಿಟರ್ಸ್, ತಾನು ಲೇಖನವನ್ನು ತಾತ್ಕಾಲಿಕವಾಗಿ ತೆಗೆದುಹಾಕುತ್ತಿರುವುದಾಗಿ ಪ್ರಕಟಿಸುತ್ತಾ, ವರದಿಯು “ನೂರಾರು ಜನರೊಂದಿಗಿನ ಸಂದರ್ಶನಗಳು, ಸಾವಿರಾರು ದಾಖಲೆಗಳು ಮತ್ತು ಹಲವಾರು ಸೈಬರ್‌ ಸೆಕ್ಯುರಿಟಿ ಸಂಸ್ಥೆಗಳ ಸಂಶೋಧನೆಯನ್ನು ಆಧರಿಸಿದೆ” ಎಂದು ಹೇಳಿದೆ.

ಏನಿತ್ತು ಈ ಲೇಖನದಲ್ಲಿ?

ರಜತ್ ಖರೆ ಮತ್ತು ಅನುಜ್ ಖರೆ ಎಂಬ ಸಹೋದರರು ನಡೆಸುತ್ತಿರುವ ಈ ಅಪ್ಪಿನ್ ಎಂಬ ಸಂಸ್ಥೆ ಒಂದು ಸಣ್ಣ ಎಜುಕೇಷನಲ್‌ ಸ್ಟಾರ್ಟ್‌ಅಪ್‌ ಆಗಿ ಪ್ರಾರಂಭವಾಗಿ, ಡೊಮೇನ್‌ನಲ್ಲಿ ಸಕ್ರಿಯವಾಗಿ ಮುಂದುವರಿಯುವ “ಬಾಡಿಗೆ ಸ್ಟೈಗಳ ಪೀಳಿಗೆಯೊಂದನ್ನು – “a generation of spies for hire ” ತರಬೇತಿಗೊಳಿಸುವ ಕೆಲಸವನ್ನು ಮಾಡಿದೆ ಎಂದು ಈ ಲೇಖನದಲ್ಲಿ ಹೇಳಲಾಗಿದೆ.

ದೊಡ್ಡ ವ್ಯವಹಾರಗಳು, ಕಾನೂನು ಸಂಸ್ಥೆಗಳು ಮತ್ತು ಶ್ರೀಮಂತ ವ್ಯಕ್ತಿಗಳಿಗಾಗಿ ಕೆಲಸ ಮಾಡುವ ಖಾಸಗಿ ತನಿಖಾಧಿಕಾರಿಗಳಿಗೆ ಅಪ್ಪಿನ್ ಸೈಬರ್‌ ಗೂಢಾಚಾರಿಕೆ (cyberespionage) ಸೇವೆಗಳನ್ನು ಒದಗಿಸಿದೆ ಎಂದು ರಾಯಿಟರ್ಸ್ ತನ್ನ ವರದಿಯಲ್ಲಿ ಆರೋಪಿಸಿದೆ. ಕಂಪನಿಯು “ಸೈಬರ್ ಬೇಹುಗಾರಿಕೆ”, “ಇಮೇಲ್ ಮಾನಿಟರಿಂಗ್” ಮತ್ತು “ಸೋಷಿಯಲ್ ಇಂಜಿನಿಯರಿಂಗ್” ನಲ್ಲಿ ಪರಿಣತಿಯನ್ನು ಹೊಂದಿದೆ ಎಂಬುದನ್ನು ತೋರಿಸುವ ಕನಿಷ್ಠ 17 ಪಿಚ್ ದಾಖಲೆಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

“2010 ರ ಪ್ರೆಸೆಂಟೇಷನ್‌ ಒಂದರಲ್ಲಿ, ಕಾರ್ಪೊರೇಟ್ ಕ್ಲೈಂಟ್‌ಗಳ ಪರವಾಗಿ ಉದ್ಯಮಿಗಳನ್ನು ಹ್ಯಾಕ್ ಮಾಡುವ ಬಗ್ಗೆ ಕಂಪನಿಯು ಸ್ಪಷ್ಟವಾಗಿ ಹೆಮ್ಮೆಯಿಂದ ಹೇಳಿಕೊಂಡಿದೆ” (“In one 2010 presentation, the company explicitly bragged about hacking businessmen on behalf of corporate clients”) ಎಂದು ಲೇಖನದಲ್ಲಿ ತಿಳಿಸಲಾಗಿದೆ.

ಅಮೇರಿಕಾದಲ್ಲಿ ರಜತ್ ಖರೆಯನ್ನು ಪ್ರತಿನಿಧಿಸುವ ಕಾನೂನು ಸಂಸ್ಥೆ ಕ್ಲೇರ್ ಲಾಕ್, ತನ್ನ ಕ್ಲೈಂಟ್ ಎಂದಿಗೂ ಯಾವುದೇ ಕಾನೂನುಬಾಹಿರ ” hack-for-hire ” ಉದ್ಯಮವನ್ನು ನಡೆಸಿಲ್ಲ ಅಥವಾ ಅಂತದ್ದನ್ನು ಬೆಂಬಲಿಸಲಿಲ್ಲ ಎಂದು ಹೇಳಿದೆ. ಖರೆ ಅವರ ಅಧಿಕಾರಾವಧಿಯಲ್ಲಿ, ಅಪ್ಪಿನ್ ವಿದ್ಯಾರ್ಥಿಗಳಿಗೆ ಸೈಬರ್ ಸೆಕ್ಯುರಿಟಿ, ರೊಬೊಟಿಕ್ಸ್ ಮತ್ತು ಕೃತಕ ಬುದ್ಧಿಮತ್ತೆಯಲ್ಲಿ ತರಬೇತಿ ನೀಡಿದೆ, ಆದರೆ ಎಂದಿಗೂ ಅಕ್ರಮ ಹ್ಯಾಕಿಂಗ್‌ ಹೇಳಿಕೊಟ್ಟಿಲ್ಲ ಎಂದು ಕ್ಲೇರ್‌ ಲಾಕ್ ಹೇಳಿಕೊಂಡಿದೆ.

ಹ್ಯಾಕಿಂಗ್ ಸೇವೆಗಳಲ್ಲಿ ಅಪ್ಪಿನ್‌ಗೆ ಇರುವ ಪರಿಣತಿಯ ಬಗ್ಗೆ ಉಲ್ಲೇಖಿಸುವ 2010 ರ ಪ್ರಸೆಂಟೇಷನನ್ನು ರಜತ್‌ ಖರೆಯವರು ಎಂದಿಗೂ ನೋಡಿಲ್ಲ, ಈ ಡಾಕ್ಯುಮೆಂಟ್ ನಕಲಿ ಅಥವಾ ತಿರುಚಲ್ಪಟ್ಟದ್ದು” ಎಂಬ ಕ್ಲೇರ್ ಲಾಕ್ ಹೇಳಿಕೆಯನ್ನು ರಾಯಿಟರ್ಸ್ ಉಲ್ಲೇಖಿಸಿದೆ.

Related Articles

ಇತ್ತೀಚಿನ ಸುದ್ದಿಗಳು