Friday, April 26, 2024

ಸತ್ಯ | ನ್ಯಾಯ |ಧರ್ಮ

 ಬ್ರಿಟಿಷರ ಆಳ್ವಿಕೆಗಿಂತಲೂ ಈಗ ಭಾರತದ ಬಡವ- ಶ್ರೀಮಂತ ಅಂತರ ಹೆಚ್ಚಳ: ವರದಿ

ಭಾರತವು ಅಭಿವೃದ್ಧಿ ಹೊಂದಿದ ದೇಶವಾಗುವತ್ತ ಹೆಜ್ಜೆ ಹಾಕುತ್ತಿದೆ ಎಂಬ ಹಸಿ ಸುಳ್ಳನ್ನು ಆಗಾಗ ಹೇಳುತ್ತಿರುತ್ತಾರೆ.   ಆದರೆ ಅದು ಸುಳ್ಳು ಎಂಬುದುನ್ನು ಇತ್ತೀಚೆಗೆ ಬಿಡುಗಡೆಗೊಂಡ ಜಾಗತಿಕ ಸಂಸ್ಥೆ ʼವರ್ಲ್ಡ್‌ ಇನ್ಕ್ವಿಲಿಟಿ ಲ್ಯಾಬ್‌ʼನ ಅಧ್ಯಯನ ವರದಿಯು ಸಾಬೀತುಪಡಿಸಿದೆ,

ಇನ್ನು 23 ವರ್ಷಗಳ ನಂತರ ಅಂದರೆ 2047 ಬಂದಾಗ ಭಾರತಕ್ಕೆ ಸ್ವಾತಂತ್ರ್ಯ ನೂರು ವರ್ಷಗಳಾಗುತ್ತವೆ. ಈ ಸಂದರ್ಭದಲ್ಲಿ ನೂರು ವರ್ಷಗಳ ಹಿಂದಿನ  ಬ್ರಿಟಿಷರ ಆಳ್ವಿಕೆ ಮತ್ತು ಈಗಿನ ಸರ್ಕಾರದ ಆಳ್ವಿಕೆಗೆ ಹೋಲಿಸಿದರೆ ಶ್ರೀಮಂತ ಮತ್ತು ಬಡವರ ನಡುವಿನ ಕಂದರವು ಈಗ ಮತ್ತಷ್ಟು ಹೆಚ್ಚಿದೆ ಎಂಬುದನ್ನು ಈ ತಜ್ಷರ ವರದಿಯು ಹಲವಾರು ಅಧ್ಯಯನಗಳ ಮೂಲಕ ಪ್ರತಿಪಾದಿಸಿದೆ.

ಇತ್ತೀಚಿನ ದಿನಗಳಲ್ಲಿ ಕೆಲವೇ ಕೆಲವು ಶತಕೋಟ್ಯಾಧಿಪತಿಗಳು ಈ ದೇಶದ ಸಂಪತ್ತನ್ನು ಕೊಳ್ಳೆ ಹೊಡೆದುಕ್ಷಣ  ಕ್ಷಣಕ್ಕೂ ತಮ್ಮ ಸಂಪತ್ತನ್ನು ಹೆಚ್ಚಿಸಿಕೊಳ್ಳುತ್ತಲೇ ಇದ್ದಾರೆ. ಹೀಗಾಗಿ ಬಡವ ಮತ್ತು ಶ್ರೀಮಂತರ ನಡುವಿನ ಅಸಮಾನತೆಯ ಕಂದರ ಪಾತಾಳಕ್ಕಿಳಿದಿದೆ, ಇಷ್ಟು ವರ್ಷಗಳವರೆಗೆ ಬಡವ ಶ್ರೀಮಂತರ ನಡುವಿನ ಕಂದರ ಎಂದು ಕೂಡಲೇ ನಮಗೆ ಯುನೈಟೆಡ್ ಸ್ಟೇಟ್ಸ್, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾಗಳು ನೆನಪಿಗೆ ಬರುತ್ತಿದ್ದವು. ಈಗ ಭಾರತವು ಸೇರಿದೆ ಎಂದು ವರದಿ ಹೇಳಿದೆ.

ಪ್ರಸಿದ್ಧ ಫ್ರೆಂಚ್ ಅರ್ಥಶಾಸ್ತ್ರಜ್ಞ ಥಾಮಸ್ ಪಿಕೆಟ್ಟಿ ಅವರು ತಂಡವು ವಸ್ತುನಿಷ್ಠವಾಗಿ ಕೈಗೊಂಡ ಈ ಅಧ್ಯಯನವು ಭಾರತದ ಹದಗೆಡುತ್ತಿರುವ ಪರಿಸ್ಥಿತಿಯ ಹಲವಾರು ವಿಧದ ಸಮೀಕ್ಷೆಗಳ ಮೂಲಕ ನಿರೂಪಿಸಿದೆ. ಭಾರತದಲ್ಲಿ ಶ್ರೀಮಂತರು ಮತ್ತು ಬಡವರ ನಡುವಿನ ಅಸಮಾನತೆಯು ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಗಿಂತಲೂ ಹೆಚ್ಚುತ್ತಿದೆ ಎಂದು ತಂಡವು ಬಲವಾಗಿ ಪ್ರತಿಪಾದಿಸಿದೆ.

ಶ್ರೀಮಂತರ ಕಪಿಮುಷ್ಠಿಯಲ್ಲಿ $1 ಟ್ರಿಲಿಯನ್  ಸಂಪತ್ತು: ಹುರುನ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ ಕಳೆದ ವಾರ 2024ರ ಜಾಗತಿಕ ಶ್ರೀಮಂತರ ಪಟ್ಟಿಯನ್ನು ಬಿಡುಗಡೆ ಮಾಡಿತು. ಭಾರತದಲ್ಲಿ ಪ್ರಸ್ತುತ ಒಟ್ಟು ̄̆271 ಶತಕೋಟ್ಯಾಧಿಪತಿಗಳು ಈ ಪಟ್ಟಿಯಲ್ಲಿ ಜಾಗ ಪಡೆದಿದ್ದಾರೆ. ಕಳೆದ ವರ್ಷ ಅಂದರೆ 2023ರಲ್ಲಿ ಕೇವಲ 94 ಹೊಸ ಬಿಲಿಯನೇರ್‌ಗಳನ್ನು ಸೇರಿಸಲಾಗಿತ್ತು. ಈಗ ಬರೋಬ್ಬರಿ ಮೂರು ಪಟ್ಟು ಶ್ರೀಮಂತರ ಸಂಖ್ಯೆ ಹೆಚ್ಚಳವಾಗಿದೆ.

. ಸುಮಾರು $1 ಟ್ರಿಲಿಯನ್ ಅಥವಾ ವಿಶ್ವದ ಒಟ್ಟು ಸಂಪತ್ತಿನ 7% ನಷ್ಟು ಸಂಪತ್ತು ಈ ಶತಕೋಟ್ಯಾದಿಪತಿಗಳ ಕಪಿಮುಷ್ಠಿಯ ಹಿಡಿತದಲ್ಲಿದೆ. ಸಜ್ಜನ್ ಜಿಂದಾಲ್, ಗೌತಮ್ ಅದಾನಿ ಮತ್ತು ಮುಖೇಶ್ ಅಂಬಾನಿ ಸೇರಿದಂತೆ ಕೆಲವು ಭಾರತೀಯ ಉದ್ಯಮಿಗಳು ಈಗ ಜೆಫ್ ಬೆಜೋಸ್ ಮತ್ತು ಎಲೋನ್ ಮಸ್ಕ್ ಸೇರಿದಂತೆ ಭೂಮಿಯ ಮೇಲಿನ ಕೆಲವು ಶ್ರೀಮಂತ ವ್ಯಕ್ತಿಗಳ ಸಮನಾಗಿ  ಬೆಳೆಯುತ್ತಿದ್ದಾರೆ. ಆದರೆ ಇನ್ನುಳಿದ ನೂರಾರು ಕೋಟಿ ಬಡವರ ಬಡತನ ಇನ್ನಷ್ಟು ಹೆಚ್ಚುತ್ತಲೇ ಇದೆ. ಈ ಬಡವರು ಮೂರು ಹೊತ್ತಿನ ಊಟಕ್ಕಾಗಿ ಪರದಾಡುವ ಪರಿಸ್ಥಿತಿ ಭಾರತದಲ್ಲಿದೆ ಎಂದು ಅಧ್ಯಯನ ವರದಿಯು ಪ್ರತಿಪಾದಿಸಿದೆ.

ಆಗ ಭಾರತದಲ್ಲಿ ಬ್ರಿಟೀಷ್‌ ಆಳ್ವಿಕೆ ಇತ್ತು. ಈಗ ಬಿಲಿಯನೇರ್ಗಳ  ಕಪಿಮುಷ್ಠಿಯಲ್ಲಿರುವ ಸರ್ಕಾರ ಆಡಳಿತ ನಡೆಸುತ್ತಿದೆ. ಈ ಬಿಲಿಯನೇರ್‌ಗಳು ತಮ್ಮ ಸಂಪತ್ತನ್ನು ಹೆಚ್ಚಿಸಿಕೊಳ್ಳುವುದರತ್ತ ಮಾತ್ರ ತಮ್ಮ ದೃಷ್ಟಿಯನ್ನು ನೆಟ್ಟಿರುತ್ತಾರೆ. ಈ ದೇಶದ ಬಡವರ ಕಡೆ ಗಮನ ಹರಿಸಲು ಸಾಧ್ಯವಿಲ್ಲ. ಹೀಗಾಗಿ ಬಡವ ಮತ್ತು ಶ್ರೀಮಂತರ ನಡುವಿನ ಕಂದರ ಮತ್ತಷ್ಟು ಹೆಚ್ಚುತ್ತಲೇ ಇರುತ್ತದೆ ಎಂಬುದನ್ನು ಆಳುವ ಪಕ್ಷಗಳು ಗಮನಿಸಬೇಕು.

Related Articles

ಇತ್ತೀಚಿನ ಸುದ್ದಿಗಳು