ಬೆಂಗಳೂರು: ರಿಷಬ್ ಶೆಟ್ಟಿ ನಿರ್ಮಾಣದ ʼಶಿವಮ್ಮʼ ಎಂಬ ಚಿತ್ರವು ಅತ್ಯಂತ ಮೆಚ್ಚುಗೆ ಗಳಿಸುತ್ತಿದ್ದು, ಚಿತ್ರಕ್ಕೆ ಅನೇಕ ಪ್ರಶಸ್ತಿಗಳ ಸುರಿಮಳೆಯಾಗುತ್ತಿದೆ.
ಸರ್ಕಾರಿ ಶಾಲೆಯಲ್ಲಿ ಅಡುಗೆ ಕೆಲಸ ಮಾಡುವ 46 ವರ್ಷದ ಶಿವಮ್ಮ ಎನ್ನುವ ಮಹಿಳೆ ತನ್ನ ಪಾರ್ಶ್ವವಾಯು ಪೀಡಿತ ಪತಿಯನ್ನು ಸಾಕಿಕೊಂಡು, ತನ್ನ ಮಕ್ಕಳ ಭವಿಷ್ಯಕ್ಕಾಗಿ ನೆಟ್ವರ್ಕ್ ಮಾರ್ಕೆಟಿಂಗ್ ವ್ಯಾಪರವನ್ನು ಬರವಸೆಯಿಂದ ಪಾಲಿಸುವ ಹೋರಾಟದ ಕಥೆ ಇದಾಗಿದೆ.
ಶಿವಮ್ಮ ಚಿತ್ರವನ್ನು ರಿಷಬ್ ಶೆಟ್ಟಿ ಫಿಲಂಸ್‌ನ ಅಡಿ ಸ್ವತಃ ರಿಷಬ್ ಶೆಟ್ಟಿ ಅವರೇ ಚಿತ್ರದ ನಿರ್ಮಾಣ ಮಾಡಿದ್ದು, ಜೈ ಶಂಕರ್ ಅರ್ಯರ ಅವರು ನಿರ್ದೇಶನ ಮಾಡಿದ್ದಾರೆ.

ಚಿತ್ರದಲ್ಲಿ ಶರಣಮ್ಮ, ಚಟ್ಟಿ, ಚನ್ನೆಮ್ಮ, ಅಬ್ಬಿಗೆರೆ, ಶಿವು ಅಬ್ಬಿಗೆರೆ, ಶೃತಿ ಕೊಂಡೇನಹಳ್ಳಿ ಮತ್ತಷ್ಟು ಹೊಸಬರು ನಡೆಸುತ್ತಿದ್ದು, ಸೌಮ್ಯನಂದ ಸಾಹಿ, ವಿಕಾಸ್ ಅರಸ್ ಅವರು ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದು, ಶ್ರೇಯಾಂಕ್ ನಂಜಪ್ಪ ಅವರು ಶಬ್ದ ವಿನ್ಯಾಸ ಮಾಡಿದ್ದಾರೆ.
ಈ ಚಿತ್ರ ಕೊಪ್ಪಳ ಜಿಲ್ಲೆಯ ಕುಕ್ನೂರು ತಾಲೂಕಿನ ಯರೇಹಂಚಿನಾಳ ಗ್ರಾಮದಲ್ಲಿ ಚಿತ್ರೀಕರಣ ವಾಗಿದ್ದು, ಸಂಪೂರ್ಣ ನಟರೆಲ್ಲ ಅದೇ ಊರಿನವರಾಗಿದ್ದು ಎಲ್ಲರೂ ಮೊದಲ ಬಾರಿ ನಟಿಸಿದ್ದಾರೆ.
NFDC ಆಯೋಜಿತ ಫಿಲಂ ಬಜಾರ್ ನ ವರ್ಕ್ ಇನ್ ಪ್ರೋಗ್ರೆಸ್ ನಲ್ಲಿ ಜಯಿಸಿ, ಬೂಸಾನ್ ಚಿತ್ರೋತ್ಸವದಲ್ಲಿ ಮೊದಲ ಪ್ರಶಸ್ತಿ ಮುಡಿಗೇರಿಸಿಕೊಂಡು, ಈಗ ಫ್ರಾನ್ಸ್ ನ ನಾಂಟೆಸ್ ನಲ್ಲಿ ನೆಡೆದ ಫೆಸ್ಟಿವಲ್ 3 ಕಾಂಟಿನೆಂಟ್ಸ್ ನಲ್ಲಿ ‘ಯುವ ತೀರ್ಪುಗಾರರ ಅವಾರ್ಡ್’ ಪಡೆದುಕೊಂಡಿದೆ.
ಈಗಾಗಲೇ ಹಲವಾರು ಚಿತ್ರೋತ್ಸವದಲ್ಲಿ ಆಯ್ಕೆ ಆಗಿದ್ದು ಮತ್ತಷ್ಟು ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುವ ನಿರೀಕ್ಷೆ ಇದೆ.